ಬಾಲಕಾರ್ಮಿಕನ ರಕ್ಷಣೆ

02chn3
Published on

ಚಾಮರಾಜನಗರ : ಬಡತನ ಮತ್ತು ಇನ್ನಿತರ ಕಾರಣಗಳಿಂದ ಶಾಲೆ ಬಿಟ್ಟು ಬಾಲಕಾರ್ಮಿಕನಾಗಿದ್ದ ಯುವಕನನ್ನು ಮಂಗಳವಾರ ಕಾರ್ಮಿಕ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿ ಶಾಲೆಗೆ ಸೇರಿಸಿದ್ದಾರೆ.

ಯಳಂದೂರು ತಾಲೂಕು ಗಣಿಗನೂರು ಗ್ರಾಮದ ಬಾಲಕನೊಬ್ಬ ಶಾಲೆ ಬಿಟ್ಟು ಯಳಂದೂರು ಪಟ್ಟಣದ ಒಂದು ಪಾತ್ರೆ ಅಂಗಡಿಯಲ್ಲಿ ಬಾಲಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಈ ವೇಳೆ ಆ ಬಾಲಕನನ್ನು ಗುರುತಿಸಿ ಕೆಲಸ ಬಿಡಿಸಿ ಗುಂಬಳ್ಳಿ ಸರ್ಕಾರಿ ಪ್ರೌಢಶಾಲೆ 10ನೇ ತರಗತಿಗೆ ದಾಖಲಿಸಲಾಯಿತು.
ಬಾಲಕನ ಕುಟುಂಬಕ್ಕೆ ಟಿ.ಎಸ್.ಪಿ. ಯೋಜನೆಯಡಿ ಲೇಖನ ಸಾಮಗ್ರಿ, ದಿನಸಿ, ಬಟ್ಟೆ, ಶಾಲಾ ಸಮವಸ, ಬ್ಯಾಗು ಇನ್ನಿತರ ದಿನಬಳಕೆ ವಸ್ತುಗಳನ್ನು ನೀಡಲಾಯಿತು. ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ.ಎಂ.ಸವಿತಾ, ತಹಸೀಲ್ದಾರ್ ಜಯಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು, ಹಿರಿಯ ಕಾರ್ಮಿಕ ನಿರೀಕ್ಷಕಿ ವೀಣಾ, ಯೋಜನಾ ನಿರ್ದೇಶಕ ಮಹೇಶ್, ಮಕ್ಕಳ ರಕ್ಷಣಾ ಘಟಕದ ಸಿದ್ದಶೆಟ್ಟಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net