ಬಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

28 anr 1
ಆಯನೂರಿನ ಕಟ್ಟಡವೊಂದರ ವಿದ್ಯುತ್ ಮೀಟರ್ ಬೋರ್ಡ್‌ಗೆ ತಗುಲಿದ್ದ ಬೆಂಕಿ.
Published on

ಆಯನೂರು: ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಪತ್ರಿಕೆ ಹಂಚುವ ಬಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಸೋಮವಾರ ಮುಂಜಾನೆ 6.40ಕ್ಕೆ ಶ್ರೇಯಸ್ ಮಿರಜ್ಕರ್ ಪತ್ರಿಕೆ ಹಂಚುವಾಗ ಗ್ರಾಮದ ವಿನಾಯಕ ವೃತ್ತದಲ್ಲಿರುವ ಕಟ್ಟಡವೊಂದರ ವಿದ್ಯುತ್ ಮೀಟರ್ ಬೋರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿರುವುದನ್ನು ಗಮನಿಸಿದ್ದಾನೆ. ಕೂಡಲೇ ಪೊಲೀಸರ ಗಮನಕ್ಕೆ ತಂದಿದ್ದಾನೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಅಗ್ನಿಶಾಮಕ ಅನಿಲ ಬಳಸಿ ಬೆಂಕಿ ನಂದಿಸಿದ್ದಾರೆ. ಯುವಕನ ಈ ಸಮಯಪ್ರಜ್ಞೆಗೆ ಆಯನೂರಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net