

ಕಲಬುರಗಿ: ಜಿಲ್ಲೆ ಪಾಲಿಗೆ ಶುಕ್ರವಾರ ಒಂದೂ ಪಾಸಿಟಿವ್ ಕೇಸ್ ದಾಖಲಾಗದೆ ಸ್ವಲ್ಪ ನೆಮ್ಮದಿ ಭಾವ ಮೂಡಿಸಿರುವ ಬೆನ್ನಲ್ಲೇ ಶನಿವಾರ ಮತ್ತೆರಡು ಕರೊನಾ ಸೋಂಕಿತ ಪ್ರಕರಣ ದೃಢಪಟ್ಟಿವೆ. ಈ ಮೂಲಕ ಸೋಂಕಿತರ ಸಂಖ್ಯೆ 22ಕ್ಕೇರಿದೆ.
ಪಿ205 ಸೋಂಕಿತನ ನೇರ ಸಂಪರ್ಕಕ್ಕೆ ಬಂದ ನಗರದ 34 ವರ್ಷದ ವ್ಯಕ್ತಿ (ಪಿ. 360) ಹಾಗೂ ಪಿ174 ಸೋಂಕಿತನ ಸಂಪರ್ಕಕ್ಕೆ ಬಂದ ಶಹಾಬಾದ್ನ 16 ವರ್ಷದ ಬಾಲಕನಲ್ಲಿ (ಪಿ.361) ಕರೊನಾ ಖಚಿತಪಟ್ಟಿದೆ. ಇವರನ್ನು ಇಎಸ್ಐ ಐಸೋಲೇಷನ್ ವಾರ್ಡಗೆ ದಾಖಲಿಸಲಾಗಿದೆ. ಸೋಂಕಿತರಲ್ಲಿ ಮೂವರು ಮೃತಪಟ್ಟಿದ್ದು, ಮೂವರು ಗುಣಮುಖರಾಗಿದ್ದಾರೆ. ಸದ್ಯ 16 ಜನ ಚಿಕಿತ್ಸೆ ಪಡೆಯುತಿದ್ದಾರೆ.
ನವದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಸಭೆಯಲ್ಲಿ ಪಾಲ್ಗೊಂಡವರ ಸಂಪರ್ಕಕ್ಕೆ ಬಂದವರನ್ನು ಕರೊನಾ ಬಿಡುತ್ತಿಲ್ಲ. ಶನಿವಾರದ ಎರಡೂ ಪ್ರಕರಣಗಳು ತಬ್ಲಿಘಿ ಸಭೆಗೆ ಹೋಗಿಬಂದವರ ಪರೋಕ್ಷವಾಗಿ ಸಂಪರ್ಕ ಹೊಂದಿದ್ದವು ಎಂಬುದು ಗಮನಾರ್ಹ. ಸೋಂಕಿತ 34 ವರ್ಷದ ವ್ಯಕ್ತಿ ಇತ್ತೀಚೆಗೆ ಮೃತಪಟ್ಟ ಬಟ್ಟೆ ವ್ಯಾಪಾರಿ (ಪಿ 205) ಸಹೋದರ ಎನ್ನಲಾಗಿದೆ. ಬಟ್ಟೆ ವ್ಯಾಪಾರಿಗೆ ತಬ್ಲಿಘಿ ಧಾಮರ್ಿಕ ಸಭೆಗೆ ಹೋಗಿ ಬಂದವರ ಜತೆ ಸಂಪರ್ಕ ಇತ್ತು. ಅದೇ ಈಗ ಮತ್ತೊಬ್ಬರಿಗೆ ಹರಡಲು ಕಾರಣವಾಗಿದೆ.
ಇನ್ನು ಪಿ.174ನೇ ಸೋಂಕಿತನ ಜತೆ ನೇರ ಸಂಪರ್ಕಕ್ಕೆ ಬಂದಿರುವ 16 ವರ್ಷದ ಹುಡುಗನನ್ನು ಕಳೆದ ರಾತ್ರಿ ಇಲ್ಲಿಯ ಸಕರ್ಾರಿ ಆಸ್ಪತ್ರೆಗೆ ಕರೆತಂದು ಪರೀಕ್ಷಿಸಿದಾಗ ಸೋಂಕು ಖಚಿತವಾಗಿದೆ.
ತಬ್ಲಿಘಿ ಸಭೆಯಲ್ಲಿ ಪಾಲ್ಗೊಂಡು ಶಹಾಬಾದ್ಗೆ ಬಂದಿದ್ದ ವ್ಯಕ್ತಿಯ ಪತ್ನಿ ಮತ್ತು ಕಿರಾಣಾ ಅಂಗಡಿ ಇಟ್ಟುಕೊಂಡಿದ್ದ ಸೊಸೆಗೆ (ಪಿ. 174) ಕರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಕಿರಾಣಾ ಅಂಗಡಿಯಲ್ಲಿ ಈ ಹುಡುಗ ಕೆಲಸ ಮಾಡುತ್ತಿದ್ದ.