ಬಾಲ ವಿಜ್ಞಾನಿಯಾಗಿ ಜಿ.ಸಿ.ಯಶಸ್ವಿ ರಾಜ್ಯ ಮಟ್ಟಕ್ಕೆ 10 ತಂಡ ಆಯ್ಕೆ

vig.jpg
Published on

ದಾವಣಗೆರೆ: ದಾವಣಗೆರೆಯ ಸೇಂಟ್ ಜಾನ್ಸ್ ಕಾನ್ವೆಂಟ್‌ನ ವಿದ್ಯಾರ್ಥಿನಿ ಜಿ.ಸಿ. ಯಶಸ್ವಿ, ನಗರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಭಾನುವಾರ ಆಯೋಜನೆಯಾಗಿದ್ದ 30ನೇ ದಾವಣಗೆರೆ ಜಿಲ್ಲಾ ಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಜಿಲ್ಲಾ ಬಾಲ ವಿಜ್ಞಾನಿ ಪ್ರಶಸ್ತಿ ಗಳಿಸಿದ್ದಾಳೆ.

‘ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಜೀವಿ ಪರಿಸರ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳೋಣ’ ಶೀರ್ಷಿಕೆಯಡಿ ಏರ್ಪಾಡಾಗಿದ್ದ ಈ ಸಮಾವೇಶದ ಸಮಾರೋಪದಲ್ಲಿ ಪ್ರಶಸ್ತಿ ವಿತರಿಸಲಾಯಿತು.

‘ನಾವು ಸೇವಿಸುವ ಆಹಾರ, ನಮ್ಮ ಆರೋಗ್ಯಕ್ಕೆ ಆಧಾರ’ ಉಪವಿಷಯ ಕುರಿತು ಯಶಸ್ವಿ ಮಂಡಿಸಿದ್ದಳು. ವಿದ್ಯಾರ್ಥಿನಿ ಎಂ. ಕೀರ್ತನಾ ಸಹಕಾರ ನೀಡಿದ್ದಳು. ಶಿಕ್ಷಕಿ ಪರಿಣಿತ ಎನ್. ಶೆಟ್ಟಿ ಗುರುಮೂರ್ತಿ ಮಾರ್ಗದರ್ಶನ ನೀಡಿದ್ದರು.

ಸಮಾರೋಪದಲ್ಲಿ ತರಳಬಾಳು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ. ಎಚ್.ವಿ.ವಾಮದೇವಪ್ಪ ಪ್ರಶಸ್ತಿ ವಿತರಿಸಿದರು. ಎಚ್.ಎಸ್‌ಟಿ.ಸ್ವಾಮಿ, ಎನ್.ಎಸ್. ವಾಣಿ, ಪಿ.ಆರ್. ಮಂಜುನಾಥ ಇತರರಿದ್ದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

* ಮುಂದಿನ ಹಂತಕ್ಕೆ ವಿದ್ಯಾರ್ಥಿಗಳು

ಕೊಕ್ಕನೂರಿನ ಸರ್ಕಾರಿ ಪ್ರೌಢಶಾಲೆಯ ಟಿ.ಸುರೇಖಾ, ಸೃಷ್ಟಿ, ಅರಬಗಟ್ಟೆ ಸರ್ಕಾರಿ ಶಾಲೆಯ ಜೆ.ಎಸ್.ಆನಿಷಾ, ಮೆಳ್ಳೇಕಟ್ಟೆ ಸರ್ಕಾರಿ ಶಾಲೆಯ ಎಂ. ರೋಹಿಣಿ, ದೊಣೆಹೊಳ್ಳಿಯ ಶರಣಶ್ರೀ ಹಿರಿಯ ಪ್ರಾಥಮಿಕ ಶಾಲೆಯ ಕೆ.ಎಸ್. ನಿರ್ಮಲಾ-ಬಿ.ಎಂ. ಪಾರ್ವತಮ್ಮ, ಜಗಳೂರಿನ ಹನಿ ಬೀ ಗ್ರಾಮಾಂತರ ಶಾಲೆಯ ಅಂಜಲಿಶ್ರೀ-ಎಸ್,ಎಂ.ಆದರ್ಶ, ತರಳಬಾಳು ಕೇಂದ್ರೀಯ ಶಾಲೆಯ ಎನ್. ರತಿಯಾ, ಈಶ್ವರಮ್ಮ ಶಾಲೆಯ ಬಿಂದು ಆರ್. ಪವಾರ್- ವಿ.ಜಿ.ಸಿಂಚನಾ, ಜಗಳೂರಿನ ಎನ್‌ಎಂಕೆ ಹಿ.ಪ್ರಾ. ಶಾಲೆಯ ಕೀರ್ತಿ ವಿವೇಕ್ ಎಂ. ಸಾಹುಕಾರ್-ಎಚ್.ಎಸ್.ಗುರುಪ್ರಸಾದ್, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ (ಸಿಬಿಎಸ್‌ಸಿ) ಟಿ.ಆರ್. ಅನಘಾ-ಪ್ರಸಾದ್ ಪೂಜಾರ್ ತಂಡಗಳು ರಾಜ್ಯ ಮಟ್ಟದ ಸಮಾವೇಶಕ್ಕೆ ಆಯ್ಕೆಯಾಗಿವೆ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net