ಬಾರ್​ನಲ್ಲಿ ಅನುಮಾನಾಸ್ಪದವಾಗಿ ಸಾವು

Published on

ತಿಪಟೂರು: ನಗರದ ಬಾರ್​ನಲ್ಲಿ ವ್ಯಕ್ತಿನೋರ್ವ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ನಗರದ ಹಿಪ್ಪೆತೋಪಿನ ನಿವಾಸಿ ಆಟೋ ಚಾಲಕ ಮಂಜುನಾಥ್​ (44)ಮೃತ. ಭಾನುವಾರ ಬೆಳಗ್ಗೆ ನಗರದ ಹಾಸನ ರಸ್ತೆಯ ಶಿಲ್ಪಾ ಬಾರ್​ ಆ್ಯಂಡ್​ ರೆಸ್ಟೋರೆಂಟಿಗೆ ಮದ್ಯಪಾನ ಮಾಡಲು ತೆರಳಿದ್ದ ಈ ವೇಳೆ ಬಾರ್​ನಲ್ಲಿ ಮೃತಪಟ್ಟಿದ್ದು, ಸಾವಿನ ಬಗ್ಗೆ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ನಗರಠಾಣೆಯ ಇನ್​ಸ್ಪೆಕ್ಟರ್​ ಜಿ.ವೆಂಕಟೇಶ್​ ಅವರು ಬೆರಳಚ್ಚು ತರು ಮತ್ತು ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶಿಲಿಸಿದ್ದು, ನಗರಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.

ಚಿಕಿತ್ಸೆ ಲಿಸದೆ ಗಿರೀಶ್​ ಸಾವು

ತುಮಕೂರು: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಆರ್​ಎಸ್​ಐ ಎಸ್​.ಗಿರೀಶ್​ (57) ಸೋಮವಾರ ಕೊನೆಯುಸಿರೆಳೆದರು. ನಗರದ ಬಟವಾಡ ಸಮೀಪದ ಯುನಿಲೆಟ್​ ಸಮೀಪ ಶನಿವಾರ ರಾತ್ರಿ 9.30ರಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ವೇಳೆ ಅಡ್ಡ ಬಂದ ಹಸುವಿಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ರಸ್ತೆ ವಿಭಜಕಕ್ಕೆ ಗುದ್ದಿ ಕೆಳಗೆ ಬಿದ್ದು, ತಲೆಗೆ ತೀವ್ರ ಪೆಟ್ಟಾಗಿತ್ತು. ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಲಕಾರಿಯಾಗಲಿಲ್ಲ. ಮೃತ ಗಿರೀಶ್​ಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಗಾರ್ಡನ್​ ರಸ್ತೆಯ ಚಿತಾಗಾರದಲ್ಲಿ ಪೊಲೀಸ್​ ಗೌರವಗಳೊಂದಿಗೆ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ಸದ್ಯ ಹೆಚ್ಚುವರಿ ಪೊಲೀಸ್​ ಅಧೀಕ್ಷಕರ ಕಚೇರಿಯಲ್ಲಿ ರೈಟರ್​ ಆಗಿದ್ದರು. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ನಿವೃತ್ತ ಪೊಲೀಸ್​ ಅಧಿಕಾರಿ ವಿ.ಮರಿಯಪ್ಪ ಸೇರಿದಂತೆ ಪೊಲೀಸ್​ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net