

ಗಂಡಸಿ: ಅರಸೀಕೆರೆ ತಾಲೂಕು ಗಂಡಸಿ ಹೋಬಳಿಯ 11 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಬಾರ್ ಆಂಡ್ ರೆಸ್ಟೋರೆಂಟ್ಗಳಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರು, ಸಿಬ್ಬಂದಿ ವರ್ಗ ವಿಫಲರಾಗಿದ್ದಾರೆ ಎಂದು ತಾಲೂಕು ಮದ್ಯಪಾನ ಪ್ರಿಯರ ಸಂಘದ ಕಾರ್ಯದರ್ಶಿ ತಮ್ಮಣ್ಣ ಗೌಡ ಆರೋಪಿಸಿದರು.
ಅರಸೀಕೆರೆ ತಾಲೂಕು ಲಾಳನಕೆರೆ ಗ್ರಾಮ ಪಂಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮದ್ಯದ ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ನೋಟಿಸ್ ನೀಡಬೇಕು ಎಂದು ಮದ್ಯಪಾನ ಪ್ರಿಯರ ಸಂಘದ ವತಿಯಿಂದ ಗುರುವಾರ ಮನವಿ ಪತ್ರ ಸಲ್ಲಿಸ ಮಾತನಾಡಿದ ಅವರು, ಮದ್ಯಪಾನ ಪ್ರಿಯರ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಂದು ಮದ್ಯದ ಅಂಗಡಿಗಳಲ್ಲಿ ಉಚಿತವಾಗಿ ಶುದ್ಧೀಕರಿಸಿದ ನೀರನ್ನು ನೀಡಬೇಕು. ಸ್ವಚ್ಛತೆ ಮತ್ತು ಕುಳಿತುಕೊಳ್ಳಲು ಅಸನಗಳ ವ್ಯವಸ್ಥೆ ಇರಬೇಕು ಎಂದು ತಿಳಿಸಿದರು.
ಕೆಲವು ಅಂಗಡಿ ಮಾಲೀಕರು ಎಂಆರ್ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದು ಸಂಘದ ಗಮನಕ್ಕೆ ಬಂದಿದ್ದು ಎಂ ಆರ್ಪಿ ದರದಲ್ಲಿ ಮಾರಾಟ ಮಾಡದ ಪಕ್ಷದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಬೀದಿಗೆ ಇಳಿದು ಸಂಘದ ವತಿಯಿಂದ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು.
ಈ ವೇಳೆ ಕರ್ನಾಟಕ ರಾಜ್ಯ ಮದ್ಯಪಾನ ಪ್ರಿಯರ ಸಂಘದ ಖಜಾಂಚಿ ಮಧು ಎಂ ಗಂಡಸಿ, ಹೋಬಳಿ ಅಧ್ಯಕ್ಷ ನಾಗರಹಳ್ಳಿ ಧರ್ಮಣ್ಣ, ಶಿವಸ್ವಾಮಿ, ಲೋಕೇಶ್ ಹಾಜರಿದ್ದರು.