

ಬೇಲೂರು: ಕಳೆದ ಮೂರು ದಿನಗಳಿಂದ ತಾಲೂಕಿನಾಧ್ಯಂತ ಬಿಟ್ಟೂ ಬಿಟ್ಟು ಸುರಿಯುತ್ತಿರುವ ಬಾರಿ ಮಳೆಗೆ ಪಟ್ಟಣ ಸಮೀಪದ ಯಗಚಿ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಯಲ್ಲಿ ಐದು ಕ್ರಸ್ಟ್ ಗೇಟ್‌ಗಳ ಮೂಲಕ ಜಲಾಶಯದಿಂದ ನೀರು ಹೊರ ಬಿಡಲಾಗಿದೆ.
ಕಳೆದ ಮೂರ‌್ನಾಲ್ಕು ದಿನಗಳಿಂದ ತಾಲೂಕು ಸೇರಿದಂತೆ ಮಲೆನಾಡು ಹಾಗೂ ಯಗಚಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತಿದ್ದು, ನೀರೆಲ್ಲ ನದಿ ಮೂಲಕ ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ ಬೇಲೂರು ಪಟ್ಟಣ ಸಮೀಪದ ಯಗಚಿ ಜಲಾಶಯಕ್ಕೆ ನೀರಿನ ಅರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು, ಕೆಲ ದಿನಗಳಿಂದ ಜಲಾಶಯದ ಐದು ಕ್ರಸ್ಟ್ ಗೇಟ್‌ಗಳ ಮೂಲಕ ಸ್ವಲ್ಪ ನೀರನ್ನು ಹೊರ ಬಿಡಲಾಗುತಿತ್ತು. ಆದರೆ ಕಳೆದ ಮೂರು ದಿನಗಳಿಂದ ಬಿಟ್ಟೂ ಬಿಟ್ಟು ಬರುತ್ತಿರುವ ಬಾರಿ ಮಳೆಯ ಕಾರಣದಿಂದ ಜಲಾಶಯಕ್ಕೆ ಹೆಚ್ಚುವರಿಯಾಗಿ 2500 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತಿದ್ದು, ಜಲಾಶಯ ಪುನ: ಸಂಪೂರ್ಣವಾಗಿ ಭತಿಯಾಗಿದೆ. ಈ ಹಿನ್ನೆಲೆಯಲ್ಲಿ ಹರಿದು ಬರುತ್ತಿರುವ ನೀರಿನಲ್ಲಿ 2 ಸಾವಿರ ಕ್ಯೂಸೆಕ್ಸ್ ನೀರನ್ನು ನೇರವಾಗಿ ನದಿ ಹಾಗೂ ಎಡದಂಡೆ ನಾಲೆ ಮೂಲಕ ಹೊರ ಬಿಡಲಾಗುತ್ತಿದೆ.