

ಬೆಟ್ಟದಪುರ: ಬಾರಸೆ ಹಾಲು ಉತ್ಪದಕರ ಸಹಕಾರ ಸಂಘ 2022-23ನೇ ಸಾಲಿನಲ್ಲಿ ರೂ.4.54 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಮೈಮುಲ್ ವಿಸ್ತರಣಾಧಿಕಾರಿ ಶ್ರೀಕಾಂತ್ ಮಾಹಿತಿ ನೀಡಿದರು.
ಬೆಟ್ಟದಪುರ ಸಮೀಪದ ಬಾರಸೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಶುಕ್ರವಾರ ಆಯೋಜಿಸಿದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘದ ಅಭಿವೃದ್ಧಿಗೆ ಸದಸ್ಯರ ಬಲ ಪ್ರಮುಖವಾಗಿದ್ದು, ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಉತ್ಪಾದಕರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಬಿ.ಕೆ.ಮಲ್ಲರಾಜೇ ಅರಸ್, ಉಪಾಧ್ಯಕ್ಷ ಬಿ.ಪಿ.ಸುರೇಶ್, ನಿರ್ದೇಶಕರಾದ ಬಿ.ಎಲ್.ಚಿಕ್ಕದೇವರಾಜೇ ಅರಸ್, ಬಿ.ವಿ ದೇವರಾಜೇ ಅರಸ್, ಬಿ.ವಿ.ಗೋಪಾಲರಾಜೇ ಅರಸ್, ಬಿ.ವಿ.ಜಯಚಂದ್ರರಾಜೇ ಅರಸ್, ಬಿ.ಎನ್.ಮುಕುಂದರಾಜೇ ಅರಸ್, ಬಿ.ಸಿ.ಚಂದ್ರಯ್ಯ, ಚಂದ್ರಕಾಂತಮ್ಮಣ್ಣಿ, ಬಿ.ಎನ್.ಸೋಮಪ್ರಭ, ಕಾರ್ಯದರ್ಶಿ ಬಿ.ಡಿ.ಆನಂದರಾಜೇ ಅರಸ್, ನೌಕರ ಡಿ.ಆದರ್ಶ ಸೇರಿದಂತೆ ಸದಸ್ಯರು, ಗ್ರಾಮಸ್ಥರು ಇದ್ದರು.