

ಬಾಗಲಕೋಟೆ: ತಾಲೂಕಿನ ಕದಾಂಪೂರ ಗ್ರಾಮದ ಶಾಲಾ ವಿದ್ಯಾರ್ಥಿನಿ ದಿವ್ಯಾ ಬಾರಕೇರ ಆತ್ಮಹತ್ಯೆ ಮಾಡಿಕೊಂಡಿದ್ದಳು ಅವರ ಮನೆಗೆ ಅಂಬಿಗ ಸಮಾಜದ ಜಿಲ್ಲಾ ನಿಯೋಗ ತೆರಳಿ ಸಾಂತ್ವಾನ ಜೆತೆಗೆ 50000 ಸಾವಿರ ಹಣ ಸಹಾಯ ಮಾಡಲಾಯಿತು.
ಭಾನುವಾರ ಬೆಳಿಗ್ಗೆ ಕದಾಂಪೂರ ಗ್ರಾಮದಲ್ಲಿರುವ ದಿವ್ಯಾ ಬಾರಕೇರ ಮನೆಗೆ ತೆರಳಿದ ಸಮಾಜದ ಜಿಲ್ಲಾಧ್ಯಕ್ಷರ ನೇತೃತ್ವದ ತಂಡ ಮೃತ ವಿದ್ಯಾರ್ಥಿನಿ ತಾಯಿ ಹಾಗೂ ಕುಟುಂಬಕ್ಕೆ ಸಾಂತ್ವಾನ ಹೇಳಿ ಕುಟುಂಬದ ಸದಸ್ಯರು ಎದೆಗುಂದದೆ ಧೈರ್ಯದಿಂದ ಇರಿ ನಿಮ್ಮ ಕುಟುಂಬದ ಜೆತೆಗೆ ಇಡೀ ಸಮಾಜ ಇರುತ್ತೆ ಯಾವದೆ ಕಾರಣಕ್ಕೂ ಮನನೋಂದಕೊಳ್ಳದೆ ಜೀವನ ನೆಡಸಿ ಆತ್ಮಸ್ಥೆರ್ಯ ಕಳೆದುಕೊಳ್ಳಬಾರದು ಎಂದು ಸಮಾಜದ ಮುಖಂಡರು ನೂಂದ ಕುಟುಂಬಕ್ಕೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲ ಸಮಾಜದ ಜಿಲ್ಲಾಧ್ಯಕ್ಷ ಮಹೇಶ ಕೋಳಿ ನೌಕರ ಸಂಘದ ಜಿಲ್ಲಾಧ್ಯಕ್ಷ ಉದಯ ಅಂಬಿಗೇರ ಜಿಲ್ಲಾ ಉಪಾಧ್ಯಕ್ಷ ಯಮನಪ್ಪ ಹಂಚನಾಳ ದಿಗಂಬರೇಶ್ವರ ಮಠದ ಸ್ವಾಮಿಜಿ ಬಸಪ್ಪ ಅಜ್ಜ, ಮುದಕಪ್ಪ ಕಟ್ಟಿಮನಿ ತಾಲೂಕಾಧ್ಯಕ್ಷ ರಾಮಣ್ಣ ರಾಮೋಡಗಿ ರಮೇಶ ಪಡಸಲಗಿ ರಾಮಣ್ಣ ಕಟ್ಟಿಮನಿ ಯಲ್ಲಪ್ಪ ಯಡಹಳ್ಳಿ ಮುತ್ತು ಜಂಬಗಿ ಹೆಚ್ ಸಿ ಅಂಬಿಗೇರ ಚಂದ್ರಶೇಖರ ಕೋಲ್ಕಾರ ಶ್ರೀಕಾಂತ ಕಟ್ಟಿಮನಿ ಸದಾಶಿವ ಹೊಸಮನಿ ಸುರೇಶ್ ತಳವಾರ್, ಪುಂಡಲಿ ಕರಣಿ ರವಿಕುಮಾರ್ ಬೆಳಗಲ್ ಉಮೇಶ ಗಸ್ತಿ ಉಮೇಶ ದಾನಕಸುರ ಬಾಲಪ್ಪ ಅಂಬಿಗೇರ ಚಂದ್ರು ಸದಪ್ಪಗೋಳ ರಾಜು ಬಾಡದ ಚಂದ್ರು ಅಂಬಿಗೇರ ಸೇರಿದಂತೆ ಇನ್ನೀತರರು ಇದ್ದರು.