ಬಾಯಿಯೊಳಗೆ ಚಿನ್ನ ತುಂಬಿಸಿ ಅಕ್ರಮ ಸಾಗಾಟ

Published on

ಮಂಗಳೂರು: ಬಾಯಿ ಹಾಗೂ ಚಪ್ಪಲಿಯಲ್ಲಿಟ್ಟು 18.75 ಲಕ್ಷ ರೂ. ಮೌಲ್ಯದ 405 ಗ್ರಾಂ ಚಿನ್ನ ಅಕ್ರಮ ಸಾಗಾಟ ಮಾಡುತ್ತಿದ್ದಾಗ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕಾಸರಗೋಡು ನಿವಾಸಿ ಶುಕೂರ್ ಮೊಯ್ದೀನ್ ಕುಂಞಿ ಹಾಗೂ ಭಟ್ಕಳದ ಮಿಶ್ರಿ ನಸಿಮುಲ್ ಗನಿ ಬಂಧಿತರು. ದುಬೈಯಿಂದ ವಿಮಾನದಲ್ಲಿ ಬಂದಿಳಿದ ಅವರನ್ನು ತಪಾಸಣೆ ನಡೆಸಿದಾಗ ಚಪ್ಪಲಿ ಹಾಗೂ ಬಾಯಿಯೊಳಗೆ ತುಂಬಿಸಿ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net