ಬಾಯಿಯ ನೈರ್ಮಲ್ಯ ದಿನಾಚರಣೆ

2 vikram 3
Published on

ಧಾರವಾಡ: ನಗರದ ಎಸ್‌ಡಿಎಂ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವಸಡು ದಂತ ಚಿಕಿತ್ಸಾ ವಿಭಾಗದ ವತಿಯಿಂದ ಆಸ್ಪತ್ರೆಯಲ್ಲಿ ಮಂಗಳವಾರ ಬಾಯಿಯ ನೈರ್ಮಲ್ಯ ದಿನ ಆಚರಿಸಲಾಯಿತು.
ಅತಿಥಿಯಾಗಿ ಆಗಮಿಸಿದ್ದ ಎಸ್‌ಡಿಎಂ ವಿವಿ ಕುಲಸಚಿವ ಡಾ. ಚಿದೇಂದ್ರ ಶೆಟ್ಟರ್ ಮಾತನಾಡಿ, ಬಾಯಿಯ ಆರೋಗ್ಯವು ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಎಲ್ಲರೂ ಬಾಯಿಯ ಆರೋಗ್ಯ ಕಾಪಾಡಿಕೊಳ್ಳಬೇಕಲ್ಲದೆ, ಪರಿಸರ ಸ್ನೇಹಿ ಟೂತ್ ಬ್ರಷಗಳನ್ನು ಬಳಸಲು ಸಲಹೆ ನೀಡಿದರು.
ವಸಡು ದಂತ ಚಿಕಿತ್ಸಾ ವಿಭಾಗದಿಂದ ಹಲ್ಲಿನ ಸಂರಕ್ಷಣೆ ಕುರಿತು ಪ್ರಬಂದ ಸ್ಪರ್ಧೆ, ರೋಗಿಗಳ ಜಾಗೃತಿ ಕುರಿತು ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು. ಭಾರತಿಯ ವಸಡು ದಂತ ಸೊಸೈಟಿ ವತಿಯಿಂದ ರೋಗಿಗಳಿಗೆ ಪರಿಸರ ಸ್ನೇಹಿ ಟೂತ್ ಬ್ರಷ್ ವಿತರಿಸಲಾಯಿತು.
ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ಆನಂದ ತಾವರಗೆರೆ, ಡಾ. ಲೇಖಾ ಕೆ., ವಿವಿಧ ವಿಭಾಗದ ಮುಖ್ಯಸ್ಥರು, ವಿದ್ಯಾರ್ಥಿಗಳು, ಇತರರು ಇದ್ದರು. ಡಾ. ಸ್ವಾತಿ ಶೆಟ್ಟಿ ಸ್ವಾಗತಿಸಿದರು. ಡಾ. ನಿಹಾರಿಕಾ ಮತ್ತು ಡಾ. ಶಾಮಿನ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net