ಬಾಬೂಜಿ ಅವರ ಬದುಕು ಅನುಸರಣೀಯ, ಶಾಸಕ ಡಾ. ಕೆ. ಶ್ರೀನಿವಾಸ್‌ಮೂರ್ತಿ ಅಭಿಪ್ರಾಯ

05 Nela Ph 01 Dr.babhujagajeevan ram jayanthi
Published on

ನೆಲಮಂಗಲ: ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಮ್ ಅವರ ಬದುಕು ಅನುಸರಣೀಯ ಎಂದು ಶಾಸಕ ಡಾ. ಕೆ. ಶ್ರೀನಿವಾಸ್‌ಮೂರ್ತಿ ಅಭಿಪ್ರಾಯಪಟ್ಟರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಸೋಮವಾರ ಆಯೋಜಿಸಿದ್ದ ಡಾ. ಬಾಬು ಜಗಜೀವನ ರಾಮ್ ಜಯಂತಿಯಲ್ಲಿ ಮಾತನಾಡಿದರು.

ದೇಶ ಕಂಡ ದಕ್ಷ ಹಾಗೂ ಶ್ರೇಷ್ಠ ಆಡಳಿತಗಾರ ಅವರು. ಕೆಳ ಸಮುದಾಯದವರ ಅಭಿವೃದ್ಧಿಗಾಗಿ ಹೋರಾಟ ಮಾಡಿದ್ದರು. ಇದಕ್ಕಾಗಿ ಬದುಕನ್ನು ಮುಡಿಪಾಗಿಟ್ಟಿದ್ದರು. ಹಾಗಾಗಿ ಅವರ ಸ್ಮರಣೆ ಅಗತ್ಯ ಎಂದರು.

ಬಾಬೂಜಿ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ತಹಸೀಲ್ದಾರ್ ಕೆ. ಮಂಜುನಾಥ್, ವಿಶೇಷ ತಹಸೀಲ್ದಾರ್ ಪ್ರಕಾಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮೋಹನ್‌ಕುಮಾರ್, ಬಿಇಒ ಕೆ.ಸಿ. ರಮೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಿವಣ್ಣ, ರಾಜಸ್ವ ನಿರೀಕ್ಷಕರಾದ ರವಿಕುಮಾರ್, ಸುದೀಪ್, ಪಿಎಸ್‌ಐ ಚಿಕ್ಕನರಸಿಂಹಯ್ಯ, ಕಾರ್ಮಿಕ ನಿರೀಕ್ಷಕಿ ನಾಗರತ್ನಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಪುಷ್ಪಾ, ದಲಿತ ಸಂಘಟನೆಗಳ ಮುಖಂಡರಾದ ಬಿ.ಆರ್. ಭಾಸ್ಕರ್‌ಪ್ರಸಾದ್, ನಾರಾಯಣಸ್ವಾಮಿ, ರಾಜಗೋಪಾಲ್, ರಾಜು, ನಾಗರಾಜು, ನಾಗೇಂದ್ರ, ರವಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net