ಬಾಬಾಸಾಹೇಬರ ಆದರ್ಶ ಪಾಲಿಸಲಿ

14Rayabag2
Published on

ರಾಯಬಾಗ: ನಮ್ಮ ದೇಶಕ್ಕೆ ಶ್ರೇಷ್ಠ ಸಂವಿಧಾನ ಮತ್ತು ಮತದಾನ ಹಕ್ಕು ನೀಡಿರುವುದು ಬಾಬಾಸಾಹೇಬರು ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಆದರ್ಶ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.

ಶಾಸಕ ಮಹೇಂದ್ರ ತಮ್ಮಣ್ಣವರ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಒಂದು ಸಮುದಾಯಕ್ಕೆ ಸೀಮಿತವಲ್ಲ ಎಂದು ಹೇಳಿದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಮಾತನಾಡಿ, ಅಂಬೇಡ್ಕರ್ ಕನಸು ನನಸು ಆಗಬೇಕಾದರೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂದರು.

ಕಾಡೇಶ ಐಹೊಳೆ ಮತ್ತು ಮಹಾವೀರ ಸಾನೆ ಉಪನ್ಯಾಸ ನೀಡಿದರು. ತಹಸೀಲ್ದಾರ್ ಎಸ್.ಆರ್. ಮುಂಜೆ, ಸಿಪಿಐ ಬಿ.ಎಸ್.ಮಂಟೂರ, ತಾಪಂ ಇಒ ಎಸ್.ಕೆ. ಕದ್ದು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಎಸ್.ಚಂದರಗಿ, ಆಧಿಕಾರಿಗಳಾದ ಶಿವಕುಮಾರ ಡಿ., ವಿನೋದ ಮಾವರಕರ, ಬಸವರಾಜಪ್ಪ ಆರ್., ಪರಮಾನಂದ ಮಂಗಸೂಳಿ, ಸುಭಾಷ ಭಜಂತ್ರಿ, ಎಸ್.ವೈ.ಸನಮನಿ, ಎಂ.ಬಿ. ಪಾಟೀಲ, ಕಲ್ಪನಾ ಕಾಂಬಳೆ, ವಿಶ್ವನಾಥ ಹಾರೂಗೇರಿ, ಗಣೇಶ ಕಾಂಬಳೆ, ಕಿರಣ ಕಾಂಬಳೆ, ಪೃಥ್ವಿರಾಜ ಜಾಧವ, ಸದಾನಂದ ಹಳಿಂಗಳಿ, ಅಪ್ಪಾಸಾಹೇಬ ಖೆಮಲಾಪುರೆ, ರವಿ ತಳವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net