ಬಾಪೂಜಿ ಎಫ್​ಸಿ ತಂಡ ಚಾಂಪಿಯನ್

h13-Baapuji FC
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ನಗರದ ಎಂಪಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕುಸುಗಲ್ಲ್ ರಸ್ತೆಯ ಸ್ಪೋರ್ಟ್ಸ್ ಪಾರ್ಕ್​ನಲ್ಲಿ ಆಯೋಜಿಸಿದ್ದ ಎಂಪಿ ಚಾಂಪಿಯನ್ಸ್ ಟ್ರೋಫಿ ಫುಟ್​ಬಾಲ್ ಟೂರ್ನಾಮೆಂಟ್​ನಲ್ಲಿ ಬಾಪೂಜಿ ಎಫ್​ಸಿ ತಂಡ ಚಾಂಪಿಯನ್ ಆಯಿತು.

ಫೈನಲ್​ನಲ್ಲಿ ಗ್ರೀನ್ ಟೈಗರ್ಸ್ ತಂಡದ ವಿರುದ್ಧ 2-0 ಗೋಲುಗಳಿಂದ ಜಯ ಸಾಧಿಸಿ 22,222 ರೂ. ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು. ರನ್ನರ್ಸ್ ಅಪ್ ತಂಡ 11,111ರೂ. ನಗದು ಹಾಗೂ ಟ್ರೋಫಿ ಪಡೆಯಿತು. ಹೆಚ್ಚು ಗೋಲು ಗಳಿಸಿದ ಮುಲಾಲ ಚಂದ್ರಶೇಖರ, ಉತ್ತಮ ಗೋಲ್ಕೀಪರ್ ಆಗಿ ಸ್ವಸ್ತಿಕ, ಉತ್ತಮ ಆಟಗಾರರಾಗಿ ಮಣಿಕಂಠ ಬಹುಮಾನ ಪಡೆದರು.

ಫೈನಲ್ ಪಂದ್ಯ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಖೇಲೊ ಇಂಡಿಯಾ ಮೂಲಕ ಕ್ರೀಡೆಗಳಿಗೆ ಹೆಚ್ಚಿನ ಪೋ›ತ್ಸಾಹ ನೀಡಲಾಗುತ್ತಿದ್ದು, ದೇಶ ಕ್ರೀಡೆಯಲ್ಲೂ ಉತ್ತಮ ಸಾಧನೆ ಮಾಡುತ್ತಿದೆ. ಹುಬ್ಬಳ್ಳಿಯಲ್ಲಿ ನಿರ್ವಿುಸಲಾಗುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣದಲ್ಲಿ ಫುಟ್​ಬಾಲ್ ಆಟಕ್ಕೂ ಹೆಚ್ಚಿನ ಆದ್ಯತೆ, ತರಬೇತಿ ವ್ಯವಸ್ಥೆ ಮಾಡಲಾಗುವುದು ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಟ್ರೋಫಿ ಹಾಗೂ ಬಹುಮಾನ ವಿತರಿಸಿ, ದೇಶದಲ್ಲಿ ಎಲ್ಲ ಕಡೆ ಕ್ರಿಕೆಟ್ ಹವಾ ಇದೆ. ಇದರ ನಡುವೆ ಪ್ರೀತಂ ಅರಕೇರಿ ಹಾಗೂ ಮಣಿಕಂಠ ಶ್ಯಾಗೋಟಿ ಅವರು ಅಚ್ಚುಕಟ್ಟಾಗಿ ಫುಟ್​ಬಾಲ್ ಟೂರ್ನಿ ಆಯೋಜಿಸಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೆಮಿಫೈನಲ್ ಪಂದ್ಯಗಳಿಗೆ ಎಂಎಲ್​ಸಿ ಪ್ರದೀಪ ಶೆಟ್ಟರ್ ಚಾಲನೆ ನೀಡಿದರು. ಎಂಪಿ ಸ್ಪೋರ್ಟ್ಸ್ ಕ್ಲಬ್ ಸದಸ್ಯರಾದ ಮಣಿಕಂಠ ಶ್ಯಾಗೋಟಿ, ಪ್ರೀತಂ ಅರಕೇರಿ, ಅರುಣಕುಮಾರ, ಜಗದೀಶ ಬುಳ್ಳಾನವರ, ಕಾರ್ತಿಕ, ಸಂತೋಷಗೌಡ ಜೀವನಗೌಡ್ರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net