ಬಾನೆತ್ತರಕ್ಕೆ ಬೆಳೆದ ಮಹಾನಾಯಕ ಮಹಾತ್ಮ

oplus_6291456
oplus_6291456
Published on

ಬಾಗಲಕೋಟೆ: ಭಾರತಕ್ಕೆ ರಾಷ್ಟçಪಿತ ವಿಶ್ವಕ್ಕೆ ಮಹಾತ್ಮನೆನಿಸಿದ ಮಹಾತ್ಮ ಗಾಂಽಯವರು ಅಹಿಂಸೆಯ ಮೂಲಕ ಭಾನೆತ್ತರಕ್ಕೆ ಬೆಳೆದ ಮಹಾನಾಯಕ ಎಂದು ವಿಜಯಪುರ ರಾಷ್ಟçಪೀತ ಮಹಾತ್ಮ ಗಾಂಽ ಫೌಂಡೇಶನ್ ಅಧ್ಯಕ್ಷ ನೇತಾಜಿ ಗಾಂಽ ಹೇಳಿದರು.

ಮುಧೋಳ ನಗರದ ಕಸಾಪ ಭವನದಲ್ಲಿ ಗುರುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕಾರ್ಯನಿರತ ಪತ್ರಕರ್ತರ ಸಂಘಗಳ ಆಶ್ರಯದಲ್ಲಿ ಸ್ವಾತಂತ್ರ‍್ಯ ಹೋರಾಟಗಾರರಾದ ದಿ.ಸೀತಾಬಾಯಿ ಹಾಗೂ ಬಸಪ್ಪ ತಿಮಸಾನಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ೨೩ನೇ ದತ್ತಿ ಉಪನ್ಯಾಸ ಹಾಗೂ ಮಹಾತ್ಮ ಗಾಂಽÃಜಿ ಅವರ ೧೫೬ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಅವರು ಮಾತನಾಡಿದರು.

ದಾರ್ಶನಿಕ, ಕ್ರೀಯಾಶೀಲ ವ್ಯಕ್ತಿತ್ವದ ಮಹಾತ್ಮ ಗಾಂಽÃಜಿಯವರು ಮನಪರಿವರ್ತನೆ ಸುಧಾರಣೆ ಜತೆಗೆ ವ್ಯಕ್ತಿತ್ವವನ್ನು ಬೆಳಸಿಕೊಳ್ಳಬೇಕು. ಸಮಾಜದ ಒಳಿತಾಗಿ ತನ್ನ ದೇಹಕ್ಕೆ ತಾವೇ ಶಿಕ್ಷೆ ಕೊಟ್ಟುಕೊಂಡು ಸಮಾಜ ಸುಧಾರಣೆ ಮಾಡುವ ಜತೆಗೆ ಪ್ರತಿ ಚಿಕ್ಕ ಚಿಕ್ಕ ವಸ್ತುವಿನ ಮೌಲ್ಯ ಅರಿತು ಸಮಾಜಕ್ಕೆ ತಿಳಿಸುವ ಕಾರ್ಯ ಮಾಡಿದ್ದಾರೆ. ಪವಿತ್ರವಾದ ಪರಂಪರೆ ಬಿಟ್ಟು ಹೋಗಿದ್ದಾರೆ ಎಂದರು.

ಕಾನಿಪ ಕಸಾಪ ಕಾರ್ಯದರ್ಶಿ ಆನಂದ ಪೂಜಾರಿ ಮಾತನಾಡಿ, ಸ್ವಾತಂತ್ರ‍್ಯ ಹೋರಾಟಗಾರ ದಿ.ಸೀತಾಬಾಯಿ ಹಾಗೂ ಬಸಪ್ಪ ತಿಮಸಾನಿ ಗಾಂಽÃಜಿಯವರ ತತ್ವಾದರ್ಶಗಳಲ್ಲಿ ಬದುಕಿದ್ದರು. ಅವರ ತತ್ವಾದರ್ಶಗಳು ಇಂದಿನ ಯುವಕಕರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಪತ್ರಕರ್ತ ವೆಂಕಟೇಶ ಗುಡೆಪ್ಪನವರ ಮಾತನಾಡಿ, ಮುಧೋಳ ಮಣ್ಣಿನ ಕಣ ಕಣದಲ್ಲಿ ಸ್ವಾತಂತ್ರ‍್ಯ ಹೋರಾಟದ ಕಿಚ್ಚು ಹಾಗೂ ದೇಶಪ್ರೇಮ ಇದೆ ಎನ್ನುವದಕ್ಕೆ ಮಂಟೂರಿನ ದಿ.ಸೀತಾಬಾಯಿ ಬಸಪ್ಪ ತಿಮಸಾನಿ ಸಾಕ್ಷಿ. ಅವರು ವಿಜಯಪುರಕ್ಕೆ ಬಂದ ಮಹಾತ್ಮ ಗಾಂಽÃಜಿಯವರಿಗೆ ಭೇಟಿಯಾಗಿ ಕೈ, ಕೊರಳಿನಲ್ಲಿ ಇದ್ದ ಚಿನ್ನಾಭರಣ ನೀಡಿದರು. ಇನ್ನು ಮುಂದೆ ಜೀವನ ಪರ್ಯಂತ ನನ್ನ ಪತಿಯ ಹತ್ತಿರ ಚಿನ್ನ ಕೇಳುವದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಅದೇ ರೀತಿಯಾಗಿ ಬದುಕಿದರು. ಅವರ ಮಗ ಮಾಜಿ ಸಂಸದ ದಿ.ಎಸ್.ಟಿ.ಪಾಟೀಲ ಹಾಗೂ ಮೊಮ್ಮಗ ದಯಾನಂದ ಪಾಟೀಲ ಅವರು ಕೂಡಾ ಒಂದಿAಚ್ಚು ಚಿನ್ನ ಹಾಕದೆ ಪರಂಪರೆ ಪರಿಪಾಲಿಸುತ್ತಿದ್ದಾರೆ ಎಂದು ಹೇಳಿದರು.

ಕಾನಿಪ ಸಂಘದ ಅಧ್ಯಕ್ಷ ಬಿ.ರತ್ನಾಕರ ಶೆಟ್ಟಿ, ಡಾ.ಶಿವಾನಂದ ಕುಬಸದ, ಡಾ.ಸಿದ್ದು ದಿವಾಣ ಕಲ್ಲಪ್ಪಣ್ಣ ಸಬರದ,ಸಂಗಮೇಶ ನೀಲಗುಂದಿ ಸೇರಿದಂತೆ ಇತರರು ಇದ್ದರು. ಹನಮಂತ ಸೋರಗಾಂವಿ ಹಾಗೂ ಸಂಗಡಿಗರಿAದ ಗಾಂಽ ಭಜನ್ ನಡೆಯಿತು. ಅದೃಶ್ಯಪ್ಪ ವಿಜಾಪುರ ಸ್ವಾಗತಿಸಿ ಪಲ್ಲವಿ ಎಂ. ನಿರೂಪಿಸಿದರು. ಸುರೇಶ ರಾಜಮಾನೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net