ಬಾನಂಗಳದಲ್ಲಿ ಹಾರಾಡಿದ ರಂಗು, ರಂಗಿನ ಗಾಳಿಪಟ

12
Published on

ಮೈಸೂರು: ಆಷಾಢ ಮಾಸದ ಗಾಳಿಯಲ್ಲಿ ಬಾನಂಗಳದಲ್ಲಿ ಹಾರಾಡಿದ ರಂಗು, ರಂಗಿನ ವೈವಿಧ್ಯ ಗಾಳಿಪಟಗಳು ನೋಡುಗರನ್ನು ಮುದಗೊಳಿಸಿದವು.
ಮೈಸೂರು ವೀರಶೈವ ಸಜ್ಜನ ಸಂಘದಿಂದ ನಗರದ ಲಲಿತಮಹಲ್ ಪ್ಯಾಲೇಸ್ ಬಳಿ ಭಾನುವಾರ ಆಯೋಜಿಸಿದ್ದ 25ನೇ ವರ್ಷದ ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ಸಂಘ ಕುಟುಂಬದವರು ಸಂಭ್ರಮದಿಂದ ಭಾಗವಹಿಸಿದ್ದರು.
ಜಿಲ್ಲಾದ್ಯಂತ ಬಂದಿಸಿದ್ದ 125ಕ್ಕೂ ಅಧಿಕ ಜನರು ಗಾಳಿಪಟ ಹಾರಿಸು ಸ್ಪರ್ಧೆಯಲ್ಲಿ ಭಿನ್ನ ವಿಭಿನ್ನ ಶೈಲಿಯ ಗಾಳಪಟ ಹಾರಿಸಿ ಖುಷಿ ಪಟ್ಟರು. ಸ್ಪರ್ಧೆಯಲ್ಲಿ ಭಾಗವಹಿಸಲು ಬಂದವರಿಗೆ ಗಾಳಿಪಟ ಮಾರಾಟ ವ್ಯವಸ್ಥೆಯೂ ಮಾಡಲಾಗಿತ್ತು. ಬಾನಂಗಳದಲ್ಲಿ ಹಾರಾಡುತ್ತಿದ್ದ ಗಾಳಿಪಟ ನೋಡಿ ತಾವೂ ಹಾರಿಸಬೇಕು ಎಂದು ಹಠ ಹಿಡಿದ ಮಕ್ಕಳಿಗೆ ಪೋಷಕರು ಗಾಳಿಪಟ ಕೊಡಿಸಿ ಅವರ ಸಂತಸ ಇಮ್ಮಡಿಯಾಗುವಂತೆ ಮಾಡಿದರು.
ಸಮುದಾಯದ ಬಂಧುಗಳೊಂದಿಗೆ ಸ್ನೇಹ ಭಾಂದವ್ಯ ವೃದ್ಧಿಸಲು ಪ್ರಗತಿಯ ಸಂಕೇತವಾದ ಗಾಳಿಪಟ ಹಾರಿಸುವ ಸ್ಪರ್ಧೆ ಆಯೋಜಿಸಿಕೊಂಡು ಬರಲಾಗುತ್ತಿದೆ. ಇಂತಹ ಕ್ರೀಡಾ ಚಟುವಟಿಕೆಗಳನ್ನು ಪ್ರತಿ ವರ್ಷದ ಆಯೋಜಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಗಾಳಿಪಟ ಸ್ಪರ್ಧೆ ಒಳಗೊಂಡಂತೆ ಮತ್ತಷ್ಟು ಕ್ರೀಡಾ ಸ್ಪರ್ಧೆ ಆಯೋಜಿಸುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಸಂಘದ ಸಂಚಾಲಕ ಪ್ರದೀಪ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net