ಬಾಣಾವರದಲ್ಲಿ ಆಂಜನೇಯಸ್ವಾಮಿ ರಥೋತ್ಸವ

12arsph2ep
ಅರಸೀಕೆರೆ ತಾಲೂಕಿನ ಬಾಣಾವರ ಗ್ರಾಮದ ಕೋಟೆ ಶ್ರೀ ಆಂಜನೇಯಸ್ವಾಮಿ ರಥೋತ್ಸವದ ನೋಟ.
Published on

ಅರಸೀಕೆರೆ: ತಾಲೂಕಿನ ಬಾಣಾವರ ಗ್ರಾಮದಲ್ಲಿರುವ ಶ್ರೀಕೋಟೆ ಆಂಜನೇಯಸ್ವಾಮಿ ರಥೋತ್ಸವ ಮಂಗಳವಾರ ಮಧ್ಯಾಹ್ನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಗ್ರಾಮ ದೇವತೆಗಳಾದ ಕರಾಳಮ್ಮ, ಪ್ಲೇಗಿನಮ್ಮ, ಕಾಳಮ್ಮ, ಬನಶಂಕರಿ ದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನವ ವಧುವಿನಂತೆ ಶೃಂಗರಿಸಲಾಗಿದ್ದ ರಥದಲ್ಲಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತದ್ದಂತೆ ನೆರೆದಿದ್ದ ಜನಸ್ತೋಮ ಜಯಘೋಷ ಮೊಳಗಿಸಿ ಬಾಳೆಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು.

ದೊಡ್ಡೇನಹಳ್ಳಿ, ಎ.ಮಲ್ಲಾಪುರ, ಮನಕತ್ತೂರು, ಉಪ್ಪನಹಳ್ಳಿ, ಚಿಕ್ಕಾರೆಹಳ್ಳಿ, ಸಾಲಾಪುರ, ಸರ್ವೆಕೊಪ್ಪಲು, ತೊಂಡಿಗನಹಳ್ಳಿ, ಶಾನೆಗೆರೆ ಸೇರಿ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು. ದೇವಾಲಯ ಸಮಿತಿ ವತಿಯಿಂದ ಭಕ್ತರಿಗೆ ಪಾನಕ, ಪಲಹಾರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net