ಬಾಣಂತಿಯರಿಗೆ ಕಳಪೆ ಮೊಟ್ಟೆ ವಿತರಣೆ

JULY,, 6, HNP., PH.1.
Published on

ಹೊಳೆನರಸೀಪುರ: ಪಟ್ಟಣದ ಹೌಸಿಂಗ್ ಬೋರ್ಡ್, ಕಿಕ್ಕೇರಮ್ಮ ದೇವಸ್ಥಾನದ ಹತ್ತಿರವಿರುವ ಅಂಗನವಾಡಿ ಕೇಂದ್ರದಲ್ಲಿ ತಾಯಿ ಕಾರ್ಡ್ ಮೂಲಕ ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡಲಾಗಿರುವ ಮೊಟ್ಟೆಗಳು ಕೆಟ್ಟು ಹೋಗಿದ್ದು, ಕಳಪೆ ಮೊಟ್ಟೆ ಪೂರೈಕೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಬಡಾವಣೆಯ ನಿವಾಸಿಗಳು ಒತ್ತಾಯಿಸಿದ್ದಾರೆ.


ರಾಜ್ಯ ಸರ್ಕಾರವು ತಾಯಿ ಹಾಗೂ ಮಗುವಿಗೆ ಅಪೌಷ್ಟಿಕತೆ ಉಂಟಾಗಬಾರದು ಎಂಬ ಕಾಳಜಿಯಿಂದ ಈ ವಿಶೇಷ ಯೋಜನೆಯನ್ನು ರೂಪಿಸಿದೆ. ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರವು ಅಕ್ಕಿ, ಬೇಳೆ, ಸಾಂಬಾರುಪುಡಿ, ಮೊಟ್ಟೆ ಮೊದಲಾದ ಪೋಷಕಾಂಶಯುಕ್ತ ಅಹಾರ ಪದಾರ್ಥಗಳನ್ನು ವಿತರಿಸುತ್ತಿದ್ದು, ಈ ಬಾರಿ ವಿತರಣೆ ಮಾಡಿರುವ ಮೊಟ್ಟೆಗಳು ಕಳಪೆಯಾಗಿದೆ. ತಿಂಗಳಿಗೆ 25 ಮೊಟ್ಟೆ ವಿತರಣೆ ಮಾಡಬೇಕು ಎಂಬ ನಿಯಮವಿದ್ದರೂ 20 ಮೊಟ್ಟೆಗಳನ್ನು ಮಾತ್ರ ಕೊಟ್ಟಿದ್ದು, ಅದರಲ್ಲೂ ಕೊಳೆತ ಮೊಟ್ಟೆಗಳನ್ನೇ ವಿತರಣೆ ಮಾಡಿರುವುದು ಎಷ್ಟು ಸರಿ? ಅಹಾರ ಪದಾರ್ಥಗಳ ವಿತರಣೆಯ ಜವಾಬ್ದಾರಿ ಹೊತ್ತ ಸಂಸ್ಥೆಯ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಮತ್ತು ಅವರ ಟೆಂಡರ್ ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net