

ಕಲಬುರಗಿ: ಬಳ್ಳಾರಿಯಲ್ಲಿ ನಡೆದ ಬಾಣಂತಿಯರ ಸಾವಿನ ಪ್ರಕರಣ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ರಾಜ್ಯ ವಕ್ತಾರೆ, ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕಿ ಡಾ.ಸುಧಾ ಹಾಲಕಾಯಿ ಒತ್ತಾಯಿಸಿದರು.
ಒಂದು ವರ್ಷದಲ್ಲಿ ೩೨೭ ಬಾಣಂತಿಯರ ಸಾವಾಗಿದೆ. ದಾವಣಗೆರೆಯಲ್ಲಿ ೨೮ ಬಾಣಂತಿಯರು ಮೃತಪಟ್ಟಿದ್ದು, ಇತ್ತೀಚೆಗೆ ಬಳ್ಳಾರಿಯಲ್ಲಿ ಆರು ಬಾಣಂತಿಯರು ಮೃತಪಟ್ಟಿದ್ದಾರೆ. ರಾಜ್ಯ ಸರ್ಕಾರ ಮಾತ್ರ ಇದರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೇ ನಿರ್ಲಕ್ಷಿಸುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿಯಲ್ಲಿ ಬಾಣಂತಿಯರು ಮೃತಪಟ್ಟಿದ್ದರೂ ಮುಖ್ಯಮಂತ್ರಿ, ಗೃಹ ಸಚಿವ ಸೇರಿ ಯಾರೂ ಭೇಟಿ ನೀಡಿಲ್ಲ. ಇದು ಸರ್ಕಾರದ ನಿರ್ಲಕ್ಷÈಕ್ಕೆ ಸಾಕ್ಷಿಯಾಗಿದೆ. ಬಾಣಂತಿಯರ ಸಾವಿನ ಬಗ್ಗೆ ಮೂಲ ಸಮಸ್ಯೆ ತಿಳಿಯುವ ಆಸಕ್ತಿ ಸರ್ಕಾರಕ್ಕೆ ಇಲ್ಲದಂತಾಗಿದೆ ಎಂದರು.
ಪ್ರಸ್ತುತ ಹೃದ್ರೋಗ, ಕ್ಯಾನ್ಸರ್ ಸೇರಿ ಗಂಭೀರ ಕಾಯಿಲೆಗಳ ರೋಗಿಗಳನ್ನು ಉಳಿಸುವ ಆಧುನಿಕ ಚಿಕಿತ್ಸಾ ವ್ಯವಸ್ಥೆ ನಮ್ಮ ಬಳಿ ಇದೆ. ಆದರೆ ಬಳ್ಳಾರಿಯ ಬಾಣಂತಿಯರನ್ನು ಉಳಿಸಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಉತ್ಕೃಷ್ಟ ದರ್ಜೆಯ ಔಷಧ ನೀಡಿ ಜೀವ ಉಳಿಸಬೇಕಿತ್ತು. ಆದರೆ ಐವಿ ಫ್ಲೂಡ್ಸ್, ಎಕ್ಸ್ಪಾಯಿರಿ ಮೆಡಿಸಿನ್ ಹಾಗೂ ಫಂಗಲ್ ಇನ್ಪೆಕ್ಷನ್ ಮೆಡಿಸಿನ್ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಶೀಘ್ರದಲ್ಲಿ ಬಿಜೆಪಿ ವೈದ್ಯಕೀಯ ಪ್ರಕೋಷ್ಠದಿಂದ ಬಳ್ಳಾರಿಗೆ ತೆರಳಿ ವಾಸ್ತವಾಂಶ ಪಡೆದು, ಮುಂಜಾಗೃತ ಕ್ರಮ, ಸುರಕ್ಷೆ ನೀಡಲು ಆಗ್ರಹಿಸಿ ಲೋಕಾಯುಕ್ತಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ವೈದ್ಯಕೀಯ ಪ್ರಕೋಷ್ಠದ ಜಿ¯್ಲÁ ಸದಸ್ಯೆ ಡಾ.ಪುಷ್ಪಲತಾ ಎಚ್.ಎಂ, ಸಪ್ನಾ ಆರ್ ಮಂಗಲಗಿ ಇದ್ದರು.