ಬಾಗಿಲು ತೆರೆದ ಅಂಚೆ ಕಚೇರಿ

29srt-1
Published on

ಶಿರಹಟ್ಟಿ: ಇಂಟರ್​ನೆಟ್ ಸಮಸ್ಯೆಯಿಂದಾಗಿ ಹಲವು ದಿನಗಳಿಂದ ಸಂಪೂರ್ಣ ಬಂದ್ ಆಗಿದ್ದ ಪಟ್ಟಣದ ಅಂಚೆ ಕಚೇರಿ ಬುಧವಾರ ಬಾಗಿಲು ತೆರೆದಿದೆ.

ಮೋಡೆಮ್ ಸುಟ್ಟುಹೋಗಿದ್ದರಿಂದ ನಿಸ್ಸಹಾಯಕ ರಾಗಿದ್ದ ಸಿಬ್ಬಂದಿ ಒಂದು ವಾರದ ಹಿಂದೆಯೇ ಕಚೇರಿ ಬಾಗಿಲಿಗೆ ಬೀಗ ಜಡಿದು ಎಲ್ಲ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿದ್ದರು. ಈ ಕುರಿತು ‘ವಿಜಯವಾಣಿ’ಯಲ್ಲಿ ವಿಸõತ ವರದಿ ಪ್ರಕಟಿಸಲಾಗಿತ್ತು. ವರದಿ ಗಮನಿಸಿದ ಅಧಿಕಾರಿಗಳು ಮೋಡೆಮ್ ವ್ಯವಸ್ಥೆ ಮಾಡಿದ್ದರಿಂದ ಕಚೇರಿಯ ಕೆಲಸ ಕಾರ್ಯಗಳು ಪುನರಾರಂಭವಾದವು. ವೃದ್ಧಾಪ್ಯ ವೇತನ, ವಿಧವಾ, ಅಂಗವಿಕಲರು, ವಿಮಾ ಕಂತು, ಠೇವಣಿ ಹಣ, ಸರ್ಕಾರಿ ಉದ್ಯೋಗ ಅರ್ಜಿಗಳ ಶುಲ್ಕ ಭರಣ ಸೇರಿದಂತೆ ಅಂಚೆ ಕಚೇರಿಯ ಸೇವೆಯನ್ನು ಅವಲಂಬಿಸಿದ ಗ್ರಾಹಕರು ಬುಧವಾರ ಸರದಿಯಲ್ಲಿ ನಿಂತು ಸೇವೆ ಪಡೆದರು.

ದಿನಾ ಬರೋದು ಕಚೇರಿಗೆ ಕೀಲಿ ಹಾಕಿದ್ದು ನೋಡಿ ಸಿಟ್ಟು ಮಾಡ್ಕೊಂಡು ಸುಮ್ನ ಮನಿ ಕಡೆ ಹೋಗತಿದ್ವಿ. ಆದ್ರ, ವಾರದ ಬಳಿಕ ಕೀಲಿ ತಗ್ದಾರ ಅನ್ನೊ ಸುದ್ದಿ ಕೇಳಿ ಕಚೇರಿಗೆ ಬಂದ್ವಿ. ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು ಖುಷಿ ಆಗೇತ್ರಿ. | ಮುದಕವ್ವ ಉಪ್ಪಾರ ಹೊಸಳ್ಳಿ ಗ್ರಾಮದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net