

ಮೈಸೂರು: ರಾಜೀವ್‌ನಗರದ ಮನೆಯೊಂದರ ಬಾಗಿಲ ಬೀಗ ಮುರಿದು ಒಳ ನುಗ್ಗಿರುವ ಖದೀಮರು, 1.46 ಲಕ್ಷ ರೂ. ಮೊತ್ತದ 73 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ರಾಜೀವ್‌ನಗರದ ನಿವಾಸಿ ನಾಗೇಶ್ ಬಾಬು, ಅವರ ತಾಯಿ ಮನೆಗೆ ಬೀಗ ಹಾಕಿ ಕೊಂಡು ಬೆಂಗಳೂರಿಗೆ ತೆರಳಿದ್ದರು.
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಈ ಕೃತ್ಯ ನಡೆದಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.