ಬಾಗಿನ ಕೊಡಲು ಮುಂದಾದ ಬಿಜೆಪಿ

24 ckm 2
ಚಿಕ್ಕಮಗಳೂರು ಪ್ರವಾಸಿ ಮಂದಿರದ ಎದುರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಬಾಗಿನ ನೀಡಲು ಕಾಯುತ್ತಿರುವ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು.
Published on

ಚಿಕ್ಕಮಗಳೂರು:  ಕಾಫಿ ನಾಡಿಗೆ ಆಗಮಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅರಿಶಿನ ಕುಂಕುಮ ಕಾಯಿ ಬಳೆ ಸಹಿತ ಬಾಗಿನ ನೀಡಿ ಸ್ವಾಗತಿಸಲು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ.

ಸಚಿವರು ನಗರದ ಪ್ರವಾಸಿ ಮಂದಿರದಲ್ಲಿರುವ ವಿಷಯ ತಿಳಿದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಹೂವು, ಹಣ್ಣು, ಬಳೆ, ಅರಿಸಿನ ಕುಂಕುಮ, ಲಕ್ಷ್ಮಿ ವಿಗ್ರಹ ಸೇರಿದಂತೆ ಬಾಗಿನ ಸಹಿತ ಪ್ರವಾಸಿ ಮಂದಿರದ ಎದುರು ತೆರಳಿದ್ದರು. ಆದರೆ ಪೊಲೀಸರು ಪ್ರವಾಸಿ ಮಂದಿರದ ಒಳಗೆ ತೆರಳಲು ಬಿಜೆಪಿ ಕಾರ್ಯಕರ್ತೆಯರಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ಬಾಗಿನ ಹಿಡಿದು ಕಾರ್ಯಕರ್ತೆಯರು ಪ್ರವಾಸಿ ಮಂದಿರದ ಗೇಟ್ ಬಳಿಯೇ ಕಾದು ನಿಂತಿದ್ದರು. ಆದರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದೇ ಮಾರ್ಗದಲ್ಲಿ ಕಾರಿನಲ್ಲಿ ತೆರಳಿದರು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರತ್ತ ತಿರುಗಿಯೂ ನೋಡಲಿಲ್ಲ.

ಇದರಿಂದ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತೆಯರು, ಸಚಿವರ ಮನೆಗೆ ಯಾರಾದರೂ ಹೋದರೆ ಅರಿಶಿನ ಕುಂಕುಮ ಕೊಡುವುದಿಲ್ಲವೇ? ಕಾಂಗ್ರೆಸ್ಸಿಗರಿಗೆ ಅರಿಶಿನ ಕುಂಕುಮ ಕಂಡರೆ ಭಯ ಎಂದು ಲೇವಡಿ ಮಾಡಿ ತಾವು ತಂದಿದ್ದ ಬಾಗಿನವನ್ನು ಹಿರಿಯ ಬಿಜೆಪಿ ಕಾರ್ಯಕರ್ತೆಗೆ ನೀಡಿ ವಾಪಸ್ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net