ಬಾಗಲಕೋಟೆ ಬಿವಿವಿಎಸ್ ವೀರಾಗ್ರಣಿ

9 Dwd 6
Published on

ಧಾರವಾಡ: ನಗರದ ಜೆಎಸ್​ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರತಿಭಾನ್ವೇಷಣೆ ಸಂಕಲ್ಪ- 2020 ಸ್ಪರ್ಧೆಯಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಬಾಗಲಕೋಟೆಯ ಬಿ.ವಿ.ವಿ.ಎಸ್ ಕಾಲೇಜಿನ ಜೀತ್ ತಂಡ ಪಡೆದುಕೊಂಡಿತು. ಮೊದಲ ರನ್ನರ್ ಅಪ್ ಪ್ರಶಸ್ತಿಯನ್ನು ಗದುಗಿನ ಎಸ್.ಎಂ.ಇ.ಎಸ್ ಅಬ್ದುಲ್ ಕಲಾಂ ಕಾಲೇಜಿನ ಎಫ್.ಟಿ.ವಿ ತಂಡ ಹಾಗೂ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ಶಿರಸಿಯ ಎಂ.ಇ.ಎಸ್ ಕಾಲೇಜಿನ ಎನ್​ಇಒ ತಂಡಗಳು ಪಡೆದವು.

ಬಹುಮಾನ ವಿಜೇತ ಕಾಲೇಜುಗಳ ವಿವರ ಈ ಮುಂದಿನಂತಿದೆ.

ಕ್ವಿಜ್: ಹುಬ್ಬಳ್ಳಿಯ ಕೆ. ಎಚ್. ಪಾಟೀಲ್ ಕಾಲೇಜಿನ ರಾಜ್ ಮ್ಯೂಸಿಕ್ ತಂಡ ಪ್ರಥಮ, ಬೆಳಗಾವಿಯ ಜೈನ್ ಬಿ.ಬಿ.ಎ ಕಾಲೇಜಿನ ಇನ್ಸಿಂಕ್ ತಂಡ ದ್ವಿತೀಯ, ಧಾರವಾಡದ ಸಿ.ಎಸ್.ಐ ಕಾಲೇಜಿನ ಸೂಪರ್ ತಂಡ ತೃತೀಯ.

ಟ್ರೇಸರ್​ಹಂಟ್: ಗದುಗಿನ ಎಸ್.ಎಂ.ಇ.ಎಸ್ ಅಬ್ದುಲ್ ಕಲಾಂ ಕಾಲೇಜಿನ ಎಫ್.ಟಿ.ವಿ ತಂಡ ಪ್ರಥಮ, ಧಾರವಾಡದ ಜೆ.ಎಸ್.ಎಸ್ ಬನಶಂಕರಿ ಕಾಲೇಜಿನ ಆಯುಷ್ ತಂಡ ದ್ವಿತೀಯ, ಹುಬ್ಬಳ್ಳಿ ಗ್ಲೋಬಲ್ ಕಾಲೇಜ್ ಆಫ್ ಕಾಮರ್ಸ್​ನ ಡಿ.ಡಿ ನ್ಯಾಷನಲ್ ತಂಡ ತೃತೀಯ.

ಒರ್ಯಾಟರಿ ವಿಭಾಗದಲ್ಲಿ ಶಿರಸಿಯ ಎಂ.ಇ.ಎಸ್ ಕಾಲೇಜಿನ ಎನ್​ಇಒ ತಂಡ ಪ್ರಥಮ, ಹುಬ್ಬಳ್ಳಿಯ ಎಸ್.ಜೆ.ಎಂ.ಸಿ ಮಹಿಳಾ ಕಾಲೇಜಿನ ಜೂಮ್ ತಂಡ ದ್ವಿತೀಯ, ಅಂಕೊಲಾದ ಗೋಖಲೆ ಸೆಂಟೆನರಿ ಕಾಲೇಜಿನ ಬಿ.ಬಿ.ಸಿ ತಂಡ ತೃತೀಯ.

ರಿಸ್ಕೇಟರ್: ಬಾಗಲಕೋಟೆಯ ಬಿ.ವಿ.ವಿ.ಎಸ್ ಕಾಲೇಜಿನ ಜೀತ್ ತಂಡ ಪ್ರಥಮ, ಬೆಳಗಾವಿಯ ಕೆ.ಎಲ್.ಇ ಗೋಗಟೆ ಕಾಲೇಜಿನ ಸಂಸ್ಕಾರ ತಂಡ ದ್ವಿತೀಯ, ಧಾರವಾಡದ ಕೆ.ಸಿ.ಡಿ ಕಾಲೇಜಿನ ಸ್ಟಾರ್ ಮೂವೀಸ್ ತಂಡ ತೃತೀಯ.

ಕಲ್ಚರಲ್: ಅಳ್ನಾವರದ ಜಿ.ಎಫ್.ಜಿ.ಸಿ ಕಾಲೇಜಿನ ಸಾಕ್ಷಿ ಟಿ.ವಿ ತಂಡ ಪ್ರಥಮ, ಜೆ.ಎಸ್.ಎಸ್ ಕಾಲೇಜಿನ ಆಜ್ ತಕ್ ತಂಡ ದ್ವಿತೀಯ, ಧಾರವಾಡದ ಕರ್ನಾಟಕ ಕಾಲೇಜಿನ ನಿಕ್ ತಂಡ ತೃತೀಯ.

ಬಹುಮಾನ ವಿತರಣೆ: ಪ್ರಯತ್ನವೆಂಬ ಪ್ರಯೋಗಶಾಲೆಯಲ್ಲಿ ಕಾರ್ಯ ಪ್ರಾರಂಭಿಸಿದರೆ ಪ್ರತಿಫಲ ದೊರೆಯುತ್ತದೆ. ಪ್ರಯತ್ನವಿಲ್ಲದೆ ಪ್ರತಿಫಲ ನಿರೀಕ್ಷಿಸುವುದು ಮೂರ್ಖತನ. ಪ್ರಯತ್ನಗಳಿಗೆ ಸೂಕ್ತ ಮಾರ್ಗದರ್ಶನ ಅವಶ್ಯ ಎಂದು ಜೆಎಸ್​ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಪ್ರಾಚಾರ್ಯ ಡಾ. ಅಜಿತ ಪ್ರಸಾದ ಹೇಳಿದರು.

ಸಂಕಲ್ಪ ಪ್ರತಿಭಾನ್ವೇಷಣೆ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ದಶಮಾನೋತ್ಸವ ಸಂಕಲ್ಪ 2020ರ ಪರವಾಗಿ ಡಾ. ಅಜಿತ ಪ್ರಸಾದ ಅವರನ್ನು ಸನ್ಮಾನಿಸಲಾಯಿತು. 30 ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟವು.

ಸೂರಜ ಜೈನ್, ಮಹಾವೀರ ಉಪಾಧ್ಯೆ, ಜಿನದತ್ತ ಹಡಗಲಿ, ವಿವೇಕ ಲಕ್ಷೆ್ಮೕಶ್ವರ, ಇತರರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net