ಬಾಕಿ ವೇತನ ಪಾವತಿಗೆ ಕ್ರಮಕೈಗೊಳ್ಳಿ

15 Gurugunta Photo 01 (1)
Published on

ಗುರುಗುಂಟಾ: ಪೈದೊಡ್ಡಿ ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಗಳಿಗಾಗಿ ಮೀಸಲಿರಿಸಿದ್ದ 15 ನೇ ಹಣಕಾಸು ಯೋಜನೆಯ ಏಳು ಲಕ್ಷ ರೂಪಾಯಿಯನ್ನು ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಒ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆಪಾದಿಸಿ ಲಿಂಗಸುಗೂರು ತಾಪಂ ಇಒ ಅಮರೇಶ ಯಾದವಗೆ ನೀರಗಂಟಿಗಳು ದೂರು ಸಲ್ಲಿಸಿದರು.

ಗ್ರಾಪಂ ವ್ಯಾಪ್ತಿಯ 5 ಗ್ರಾಮಗಳಿಗೆ 15 ವರ್ಷಗಳಿಂದ ನೀರು ಪೂರೈಸುತ್ತಿದ್ದೇವೆ. ನೀರು ಪೂರೈಕೆ ಕೆಲಸದೊಂದಿಗೆ ಪಂಚಾಯಿತಿಯಿಂದ ವಹಿಸುವ ಇತರ ಕೆಲಸಗಳನ್ನೂ ಮಾಡುತ್ತಿದ್ದೇವೆ. ಆದರೆ, ಕಳೆದ ಆರೇಳು ತಿಂಗಳಿಂದ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಸಂಸಾರ ನಡೆಸುವುದು ದುಸ್ತರವಾಗಿದೆ. ಬಾಕಿ ಪಾವತಿಸಲಾಗದೆ ಸಾಮಗ್ರಿ ಖರೀದಿಸಿದ ಅಂಗಡಿಗಳ ಮಾಲೀಕರಿಂದ ಕಣ್ತಪ್ಪಿಸಿ ತಿರುಗಾಡಬೇಕಿದೆ. ಬಾಕಿ ವೇತನ ಪಾವತಿಸಲು ಕ್ರಮಕೈಗೊಳ್ಳಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net