ಬಾಂಬ್ ಪತ್ತೆ ಕಲ್ಪಿತ ಪ್ರದರ್ಶನ

airport bomb
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಗುರುವಾರ ಮಧ್ಯಾಹ್ನ ಬಾಂಬ್ ಪತ್ತೆ ಹಾಗೂ ನಿಷ್ಕ್ರೀಯಗೊಳಿಸುವ ಕಲ್ಪಿತ ಪ್ರದರ್ಶನ ನಡೆಯಿತು.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ವಿಮಾನ ನಿಲ್ದಾಣಕ್ಕೆ ಶ್ವಾನಪಡೆಯೊಂದಿಗೆ ನುಗ್ಗಿ, ರನ್ ವೇ ಸಮೀಪದ ಬಸ್​ನಲ್ಲಿ ಇಟ್ಟಿದ್ದ ಬಾಂಬ್ ಪತ್ತೆ ಮಾಡಿತು. ನಂತರ ಸಿಬ್ಬಂದಿ ಬಾಂಬ್ ಅನ್ನು ನಿಷ್ಕ್ರೀಯಗೊಳಿಸಿತು.

ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶಕುಮಾರ, ಟರ್ವಿುನಲ್ ಇನ್ ಚಾರ್ಜ್ ಪ್ರತಾಪ ಬಿ.ವಿ., ಕರ್ನಾಟಕ ಕೈಗಾರಿಕಾ ಸುರಕ್ಷತಾ ದಳದ ಅಸಿಸ್ಟೆಂಟ್ ಕಮಾಂಡೆಂಟ್ ಈರಪ್ಪ ವಾಲಿ, ಎಸಿಪಿ ಶಿವಪ್ರಸಾದ ನಾಯ್ಕ , ರಾಜ್ಯ ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net