ಬಾಂಗ್ಲಾ ಹಿಂದುಗಳ ರಕ್ಷಣೆಗೆ ಭಾರತ ಮುಂದಾಗಲಿ

9Npn2A
Published on

ನಿಪ್ಪಾಣಿ: ಬಾಂಗ್ಲಾದೇಶದಲ್ಲಿ ಹಿಂದುಗಳ ವಿರುದ್ಧ ನಡೆಯುತ್ತಿರುವ ಅನ್ಯಾಯ ಖಂಡಿಸಿ ಧರ್ಮವೀರ ಸಂಭಾಜಿ ಮಹಾರಾಜ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.

ದತ್ತಪೀಠ ತಮನಕವಾಡಾಮಠದ ಸಚ್ಚಿದಾನಂದ ಬಾಬಾ ಸ್ವಾಮೀಜಿ ಮಾತನಾಡಿ, ಭಾರತ ಸರ್ಕಾರವು ಬಾಂಗ್ಲಾದೇಶದೊಂದಿಗಿನ ಎಲ್ಲ ಸಂಬಂಧಗಳನ್ನು ಮುರಿದು ಮಿಲಿಟರಿ ಕ್ರಮ ತೆಗೆದುಕೊಳ್ಳಬೇಕು. ಸಮಾಜದ ಹಿತಕ್ಕಾಗಿ ದುಡಿಯುತ್ತಿರುವ ಬಾಂಗ್ಲಾ ದೇಶದಲ್ಲಿರುವ ಹಿಂದು ಧರ್ಮದ ಸಾಧು-ಸಂತರಿಗೆ ಅನ್ಯಾಯ ಮಾಡುತ್ತಿದ್ದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಶ್ವ ಹಿಂದು ಪರಿಷತ್‌ನ ಜಿಲ್ಲಾಧ್ಯಕ್ಷ ವಿರೂಪಾಕ್ಷಲಿಂಗ, ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ ಮಾತನಾಡಿದರು. ಅನಿಲ ಖಾಂಡ್ಕೆ, ಸುಚಿತಾ ಕುಲಕರ್ಣಿ, ಪರಾಗ ಚುಡೆಕರ, ವಕೀಲೆ ಸುಷ್ಮಾ ಬೇಂದ್ರೆ, ಅಮೋಲ ಚೆಂಡಕೆ ಮಾತನಾಡಿದರು. ದೀಪಕ ಭಡಗತಾವೆ, ಸಾಗರ ಶ್ರೀಖಂಡೆ, ಬಬನ ನಿರ್ಮಳೆ, ಚಾರುದತ್ತ ಪಾವವಲೆ, ರಾಜೇಶ ಆವಟೆ, ಅಭಿಜಿತ ಸಾದಲಕರ, ಆನಂದ ಪಾಟೀಲ, ಬಾಳು ಹವಾಲ್ದಾರ್, ರಿಶಿಕೇಶ ಮಾನೆ, ಅಮರ ದೇಸಾಯಿ, ದೀಪಕ ಬುದಿಹಾಳ, ಅಜಿತ ಪಾರಳೆ, ಅನಿಲ ಬುಡಲೆ ಸೇರಿ ಇಸ್ಕಾನ್, ವಿಶ್ವ ಹಿಂದು ಪರಿಷತ್ ಹಾಗೂ ಹಿಂದು ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net