ಬಾಂಗ್ಲಾ ಹಿಂದುಗಳ ನೆರವಿಗೆ ಕೇಂದ್ರ ನಿಲ್ಲಲ್ಲಿ

Lingaraj Appa
Published on

ಕಲಬುರಗಿ: ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮತ್ತು ಕಾನೂನು ಸುವ್ಯವಸ್ಥೆ ಹಾದಿತಪ್ಪಿದ್ದು, ಅಲ್ಲಿನ ಅರಾಜಕತಾವಾದಿಗಳು ಅಲ್ಲಿನ ಹಿಂದುಅಲ್ಪಸAಖ್ಯಾತರ ಮೇಲೆ ದಾಳಿ ನಡೆಸಿ, ಹಿಂಸಿಸುತ್ತಿದ್ದಾರೆ. ಕೂಡಲೇ ಭಾರತದ ಸರ್ಕಾರ ಹಿಂದುಗಳ ಸುರಕ್ಷತೆಯನ್ನು ಖಾತ್ರಿ ಪಡಿಸಿಕೊಳ್ಳಬೇಕು, ಅವರ ರಕ್ಷಣೆಗೆ ನೆರವು ನೀಡಬೇಕು ಎಂದು ವಿಶ್ವ ಹಿಂದು ಪರಿಷತ್ ಕರ್ನಾಟಕ ಪ್ರಾಂತ ಅಧ್ಯಕ್ಷ ಲಿಂಗರಾಜ ಅಪ್ಪ ಆಗ್ರಹಿಸಿದರು.
ಬಾಂಗ್ಲಾದಲ್ಲಿ ಹಿಂಸಾಚಾರದಿAದ ಚುನಾಯಿತ ಪ್ರಧಾನಿಯೇ ದೇಶವನ್ನು ತೊರೆದಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕಾನೂನು ನಿಯಂತ್ರಣ ಕೈಮೀರಿ ಹೋಗಿದೆ. ಗೊಂದಲಮಯ ವಾತಾವರಣದಲ್ಲಿ ಅಲ್ಲಿನ ತೀವ್ರಗಾಮಿ ಜಿಹಾದಿ ಶಕ್ತಿಗಳು ಹಿಂದು ಸಮಾಜದ ಮೇಲೆ ನಿರಂತರ ಹಲ್ಲೆ, ಕಿರುಕುಳ ನೀಡುತ್ತಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ಬಾಂಗ್ಲಾ ದೇಶದ ಅಲ್ಪಸಂಖ್ಯಾತ ಹಿಂದುಗಳು ಜೀವನ ನಡೆಸುವುದೇ ದುಸ್ಥರವಾಗಿದೆ. ಅಲ್ಲಿನ ವಾತಾವರಣ ಹದಗೆಡುತ್ತಿದೆ. ಪರಿಸ್ಥಿತಿ ಆತಂಕಕಾರಿಯಾಗಿ ಪರಿಣಮಿಸಿದೆ. ಆದ್ದರಿಂದ ಬಾಂಗ್ಲಾ ದೇಶದ ಅಲ್ಪಸಂಖ್ಯಾತ ಹಿಂದುಗಳ ಸುರಕ್ಷತೆಗಾಗಿ, ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಭಾರತದ ಕೇಂದ್ರ ಸರ್ಕಾರ ಕುರುಡನಂತೆ ವರ್ತಿಸಬಾರದು ಎಂದು ಆಗ್ರಹಿಸಿದರು.
ವಿಎಚ್‌ಪಿ ಪ್ರಾಂತ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ, ಜಿಲ್ಲಾಧ್ಯಕ್ಷ ಶ್ರೀಮಂತ ನವಲದಿ, ಪ್ರಶಾಂತ ಗುಡ್ಡಾ, ಸತೀಶ ಮಾವೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net