ಮೈಸೂರು: ಅಕಾಲಿಕ ಮಳೆಯಿಂದ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಸಂಭ್ರಮಕ್ಕೆ ರಸಭಂಗ ಉಂಟಾಯಿತು.
ಮಾಂಡೂಸ್ ಚಂಡಮಾರುತ ಪರಿಣಾಮದಿಂದಾಗಿ ಮೈಸೂರಿನಲ್ಲಿ ಶನಿವಾರದಿಂದಲೂ ಮಳೆ ಆಗುತ್ತಿದೆ. ಭಾನುವಾರ ಸಹ ಜಿಟಿ ಜಿಟಿ ಮಳೆಯೊಂದಿಗೆ ಆಗೊಮ್ಮೆ ಈಗೊಮ್ಮೆ ಧಾರಾಕಾರ ಮಳೆ ಆಗಿದೆ. ದಿನವಿಡೀ ಸುರಿದ ಮಳೆಯಿಂದ ಜನರು ರಂಗಾಯಣದ ಕಡೆಗೆ ಬರಲು ಮನಸ್ಸು ಮಾಡಲಿಲ್ಲ. 2ನೇ ದಿನವಾದ ಭಾನುವಾರವೂ ರಂಗಾಯಣದಲ್ಲಿ ಸಂಭ್ರಮ ಮೇಳೈಸಲಿಲ್ಲ.
ವಾರಾಂತ್ಯ ಸಂದರ್ಭದಲ್ಲಿ ಬಹುರೂಪಿ ರಂಗೋತ್ಸವವನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಇಲ್ಲಿಗೆ ಲಗ್ಗೆಯಿಡುತ್ತಾರೆ. ಜನರಿಂದ ಗಿಜಿಗುಡುವ ಇಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗುತ್ತದೆ. ಆದರೆ, ಈ ಸಲ ಈ ರೀತಿ ಸಡಗರ, ಸಂಭ್ರಮ ಇರಲಿಲ್ಲ. ನಿರೀಕ್ಷಿತ ಮಟ್ಟದಲ್ಲೂ ಜನರೂ ಸೇರಿರಲಿಲ್ಲ.
ಈ ಬಾರಿ ರಂಗಾಸಕ್ತರನ್ನು ಸೆಳೆಯುವ ಕಾರ್ಯಕ್ರಮವೂ ಇರಲಿಲ್ಲ. ಉತ್ತಮ ನಾಟಕ ತಂಡ, ಅನ್ಯರಾಜ್ಯಗಳ ಕಲಾತಂಡಗಳನ್ನೂ ಕರೆಸಿರಲಿಲ್ಲ. ಒಟ್ಟಿನಲ್ಲಿ ಈ ಸಲ ಅಂತಹ ವಿಶೇಷತೆ ಇರದ ಕಾರಣಕ್ಕೂ ಜನರು ಬಹುರೂಪಿ ರಂಗೋತ್ಸವದತ್ತ ಸುಳಿಯಲಿಲ್ಲ ಎಂಬ ಮಾತು ಕೇಳಿ ಬಂದಿತು.
ಸಿನಿಮಾ ಪ್ರದರ್ಶನ:
ಚಲನಚಿತ್ರೋತ್ಸವದಲ್ಲಿ 3 ಸಿನಿಮಾಗಳು ಪ್ರದರ್ಶನಗೊಂಡವು. ಶ್ರೀರಂಗಮಂದಿರದಲ್ಲಿ ಆದಿತ್ಯ ರಾನಡೆ ನಿರ್ದೇಶನದ ಹಿಂದಿ ಭಾಷೆಯ ‘ರಾಂಚಿ ಪಖಾರ’ ಚಿತ್ರ, ಇಂಗ್ಲಿಷ್ ಭಾಷೆಯ ‘ದಿ ಪ್ರೈಸ್ ಆಫ್ ಫ್ರೀ’ ಮತ್ತು ಮಹೇಶ್ ನಾರಾಯಣನ್ ನಿರ್ದೇಶನದ ಮಲಯಾಳಂನ ‘ಟೇಕ್‌ಆಫ್’ ಸಿನಿಮಾ ತೆರೆಕಂಡಿತು. ಆದರೆ, ಮಳೆಯಿಂದ ಪ್ರೇಕ್ಷಕರ ಕೊರತೆ ಕಾಡಿತು.
ನಾಟಕ ಪ್ರದರ್ಶನ
ನಾಟಕ ನೋಡಲು ನಿರೀಕ್ಷಿತ ಮಟ್ಟದಲ್ಲಿ ಜನರು ಇರಲಿಲ್ಲ. ಭೂಮಿಗೀತದಲ್ಲಿ ಗಣಿತಜ್ಞ ಭಾಸ್ಕರಾಚಾರ್ಯ ಜೀವನಾಧಾರಿತ ಕನ್ನಡ ನಾಟಕ ‘ಲೀಲಾವತಿ’ ಪ್ರದರ್ಶನಗೊಂಡಿತು. ಶಶಿಧರ್ ಡೋಂಗ್ರೆ ರಚನೆಯ ಪ್ರೊ.ಎಚ್.ಎಸ್.ಉಮೇಶ್ ನಿರ್ದೇಶನದಲ್ಲಿ ಮೈಸೂರಿನ ಕಲಾಸುರುಚಿ ತಂಡದವರು ಉತ್ತಮವಾಗಿ ಪ್ರಸ್ತುತಪಡಿಸಿದರು.
ಕಿರುರಂಗಮಂದಿರದಲ್ಲಿ ಮತ್ತೊಂದು ಕನ್ನಡ ನಾಟಕ ‘ಚಂದ್ರಹಾಸ’ಕ್ಕೂ ಸ್ಪಂದನೆ ದೊರೆಯಿತು. ಕುವೆಂಪು ರಚನೆಯ ಪ್ರಮೋದ್ ಶಿಗ್ಗಾವಿ ವಿನ್ಯಾಸ, ನಿರ್ದೇಶನದಲ್ಲಿ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದ ಕಲಾವಿದರು ಸೊಗಸಾಗಿ ಅಭಿನಯಿಸಿ ಸಭಿಕರ ಮನಗೆದ್ದರು.
ಕಲಾಮಂದಿರದಲ್ಲಿ ಪ್ರದರ್ಶನ ಕಂಡ ‘ಇಡಕಿಣಿ ಕಥಾಯರಥಂ’ ತಮಿಳು ನಾಟಕಕ್ಕೆ ನೀರಸ ಪ್ರತಿಕ್ರಿಯೆ ದೊರೆಯಿತು. ಎಸ್.ಮುರುಘಭೂಪತಿ ರಚನೆ, ನಿರ್ದೇಶನದಲ್ಲಿ ತಮಿಳುನಾಡಿನ ಮನಲ್‌ಮಾಗುಡಿ ಥಿಯೇಟರ್ ಲ್ಯಾಂಡ್‌ನ ಕಲಾವಿದರು ಸೊಗಸಾಗಿ ಅಭಿನಯಿಸಿದರು. ಆದರೆ, ನೋಡಲು ಪ್ರೇಕ್ಷಕರು ಇರಲಿಲ್ಲ. ಶೇ.50ರಷ್ಟು ಕುರ್ಚಿಗಳು ಖಾಲಿ ಹೊಡೆಯುತ್ತಿದ್ದವು.
ಮಳೆಯಿಂದಾಗಿ ವನರಂಗದ ಬದಲಾಗಿ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಜಾನಪದೋತ್ಸವ ನಡೆಯಿತು. ಮಂಡ್ಯದ ಸವಿತಾ ಚಿರಕುನ್ನಯ್ಯ ಡೊಳ್ಳುಕುಣಿತ, ನಗರದ ಗುರುರಾಜ್ ಮತ್ತು ತಂಡದಿಂದ ನೀಲಗಾರರ ಮೇಳ ನಡೆಯಿತು.
ಕಳೆಗುಂದಿದ್ದ ಕರಕುಶಲ ಮೇಳ:
ಮಳೆಯಿಂದಾಗಿ ಕರಕುಶಲ ಮೇಳಕ್ಕೆ ಕಳೆಗುಂದಿತ್ತು. ಕೆಲ ವ್ಯಾಪಾರಸ್ಥರು ಮಳಿಗೆ ತೆರವು ಮಾಡಿ ವಾಪಸ್ ಹೋಗಿದ್ದರು. ಇದರಿಂದ ಕೆಲ ಮಳಿಗೆಗಳು ಖಾಲಿ ಬಿದ್ದಿದ್ದವು.
ಕರಕುಶಲ ಮೇಳಕ್ಕೆ ಹಾಕಿರುವ ಪೆಂಡಾಲ್‌ನಿಂದ ಮಳೆ ನೀರು ಸೋರುತ್ತಿದ್ದು, ಮಳಿಗೆದಾರರು ಕಂಗೆಟ್ಟಿದ್ದಾರೆ. ಮಳಿಗೆದಾರರ ಕೋರಿಕೆ ಮೇರೆಗೆ ಮಳಿಗೆ ಛಾವಣಿಯಿಂದ ಮಳೆ ನೀರು ಸೋರುವಿಕೆಯಿಂದ ಮಳಿಗೆಯಲ್ಲಿರುವ ವಸ್ತುಗಳನ್ನು ರಕ್ಷಣೆಗಾಗಿ ಟಾರ್ಪಾಲ್ ಹಾಕಲಾಗಿದೆ. ಇದರ ನಡುವೆ ಮಳಿಗೆದಾರರು ತಮ್ಮ ಅಮೂಲ್ಯ ವಸ್ತುಗಳನ್ನು ರಕ್ಷಿಸಲು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಿಡುವ ಪ್ರಯತ್ನ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲ ಉಪಯೋಗಕ್ಕೆ ಬರುತ್ತಿಲ್ಲ. ಮಳೆಯಿಂದ ಜನರು ಇತ್ತ ಬರುತ್ತಿಲ್ಲ. ವ್ಯಾಪಾರವೂ ಆಗುತ್ತಿಲ್ಲ. ಇದರಿಂದ ವಿವಿಧೆಡೆಯಿಂದ ಬಂದಿದ್ದ ವರ್ತಕರು ಕಂಗಾಲಾಗಿದ್ದಾರೆ.

ದರ ಬಲು ದುಬಾರಿ:
ಆಹಾರ ಮೇಳದಲ್ಲಿ ತಿಂಡಿ ತಿನಿಸುಗಳ ಬೆಲೆ ಬಲು ದುಬಾರಿ ಆಗಿತ್ತು. ಇದರಿಂದ ಗ್ರಾಹಕರ ಜೇಬು ಸುಟ್ಟಿತ್ತು. ಹೊರಗಡೆ, ಹೋಟೆಲ್‌ಗಿಂತ ಎರಡ್ಮೂರು ಪಟ್ಟು ಹೆಚ್ಚಿನ ದರ ಇಲ್ಲಿತ್ತು. ಮನಸ್ಸೋ ಇಚ್ಛೆ ದರ ನಿಗದಿಪಡಿಸಿ ಗ್ರಾಹಕರನ್ನು ಸುಲಿಗೆ ಮಾಡಲಾಯಿತು.
ಕಂಬಳಿಗೆ ಬೇಡಿಕೆ:
ಕರಕುಶಲ ಮೇಳದಲ್ಲಿ ಕುರಿ ತುಪ್ಪಟದಿಂದ ತಯಾರಿಸಿರುವ ಕರಿ ಕಂಬಳಿ ಹಾಗೂ ಟೋಪಿಗೆ ಬೇಡಿಕೆ ಕಂಡುಬಂತು.
ಪೂಜಾ ಕಾರ್ಯಕ್ಕೆ ಬಳಸುವ ಕರಿ ಕಂಬಳಿ, ಚಳಿಯಿಂದ ರಕ್ಷಿಸಿಕೊಳ್ಳಲು ತುಪ್ಪಟದಿಂದ ತಯಾರಿಸಿರುವ ಟೋಪಿ, ಕೈ ಹಾಗೂ ಕಾಲಿಗೆ ಕಟ್ಟುವ ದೃಷ್ಟಿದಾರ, ಹೊದಿಕೆಯಾಗಿ ಬಳಸುವ ಕಂಬಳಿಯನ್ನು ಜನರು ಖರೀದಿಸಿದರು.
‘ಕಳೆದ ಎರಡು ದಿನಗಳಿಂದ ನಮ್ಮ ಮಳಿಗೆ ತೆರೆದಿರಲಿಲ್ಲ. ಆದರೆ, ಇಂದು ಮಳಿಗೆ ತೆರೆಯುತ್ತಿದ್ದಂತೆ ಜನ ನಮ್ಮಲ್ಲಿರುವ ಗುಣಮಟ್ಟದ ತುಪ್ಪಟದಿಂದ ತಯಾರಿಸಿರುವ ವಸ್ತುಗಳನ್ನು ಖರೀದಿಸುತ್ತಿದ್ದಾರೆ’ ಎಂದು ಕರಿಕಂಬಳಿ ಮಾರಾಟ ಮಳಿಗೆದಾರ ರಾಣೆಬೆನ್ನೂರು ತಾಲೂಕಿನ ರಾಣಿಬೆನ್ನೂರಿನ ಮೆಡ್ಲೇರಿಯ ಚಂದ್ರು ತಿಳಿಸಿದರು.