ಬಹುರಾಜ್ಯಗಳಲ್ಲಿ ಅರಿಹಂತ ಸಹಕಾರಿ ಶಾಖೆ

3
ಬೋರಗಾಂವ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಅರಿಹಂತ್​ ಕೋ&ಆಪ್​ ಕ್ರೆಡಿಟ್​ ಸೊಸೆಟಿಯ ವಾರ್ಷಿಕ ಸಭೆಯಲ್ಲಿ ಸಂಕೇಶ್ವರ ಶಾಖೆಯ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ರಾವಸಾಹೇಬ ಪಾಟೀಲ, ಅಭಿನಂದನ ಪಾಟೀಲ, ಉತ್ತಮ ಪಾಟೀಲ, ಅಭಿಜಿತ ಪಾಟೀಲ, ಅಯ ಪಾಟೀಲ ಇತರರಿದ್ದರು.
Published on

ಬೋರಗಾಂವ: ಅರಿಹಂತ್​ ಕೋ&ಆಪ್​ ಕ್ರೆಡಿಟ್​ ಸಂಸ್ಥೆ ಬಹುರಾಜ್ಯ ಸ್ಥಾನ ಪಡೆದುಕೊಂಡಿದ್ದು, ಶ್ರೀದಲ್ಲಿ ಮಹಾರಾಷ್ಟ್ರದಲ್ಲಿ ಶಾಖೆಗಳನ್ನು ವಿಸ್ತರಿಸುವ ಮೂಲಕ ಮಾದರಿ ಸಂಸ್ಥೆಯಾಗಿ ಬೆಳೆಯಲಿದೆ ಎಂದು ಅಧ್ಯ ರಾವಸಾಹೇಬ ಪಾಟೀಲ ಹೇಳಿದರು.

ಪಟ್ಟಣದ ಅರಿಹಂತ ಕೋ&ಆಪ್​ ಕ್ರೆಡಿಟ್​ ಸಂಸ್ಥೆ ಸಭಾಗೃಹದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 33ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಅರಿಹಂತ ಸಂಸ್ಥೆ ರಾಜ್ಯದ ವಿವಿಧೆಡೆ ಶಾಖೆ ಸೇರಿ ಮಹಾರಾಷ್ಟ್ರದ ಕೊಲ್ಲಾಪುರ, ಪುಣೆ, ಜೈಸಿಂಗ್​ಪುರ, ಸಾಂಗ್ಲಿ, ಇಚಲಕರಂಜಿ, ಗಾಂ-ಧಿನಗರ, ಮ್ಹಾಕ್ವೆಯಲ್ಲಿ ಶ್ರೀ ಶಾಖೆಗಳನ್ನು ತೆರೆದು ಸಾಮಾನ್ಯ ಸದಸ್ಯರ ಮತ್ತು ರೈತರ ಆರ್ಥಿಕ ಬೆಳವಣಿಗೆ ಮತ್ತು ಜೀವನಮಟ್ಟ ಉತ್ತಮಪಡಿಸಲಿದೆ ಎಂದರು.

ಉಪಾಧ್ಯ ಸುಭಾಷ ಶೆಟ್ಟಿ ಮಾತನಾಡಿ, ಸಂಸ್ಥೆ 13870 ಸದಸ್ಯರು, 5.51ಕೋಟಿ ರೂ. ಷೇರು ಬಂಡವಾಳ, 67.63 ಕೋಟಿ ರೂ. ನಿಧಿ ಹಾಗೂ 1104 ಕೋಟಿ ರೂ. ಠೇವಣಿ ಹೊಂದಿದೆ. 16.96 ಕೋಟಿ ರೂ. ಸಂಸ್ಥೆಯ ವತಿಯಿಂದ ವಿವಿಧೆಡೆ ಹೂಡಿಕೆ ಮಾಡಲಾಗಿದೆ. 938.48 ಕೋಟಿ ರೂ. ಸಾಲ ನೀಡಿ, 9.72 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ ಎಂದರು.

ಮಾಜಿ ಶಾಸಕ ಸುಭಾಷ ಜೋಶಿ ಮಾತನಾಡಿ, ಸಂಸ್ಥಾಪಕ ರಾವಸಾಹೇಬ ಪಾಟೀಲ ಅರಿಹಂತ ಸಂಸ್ಥೆಯನ್ನು ಸ್ಥಾಪಿಸಿದ್ದರೂ ಅವರ ಪುತ್ರರು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲೂ ಶಾಖೆ ತೆರೆಯುವ ಉನ್ನತ ಮಟ್ಟಕ್ಕೆ ತಂದು ನಿಲ್ಲಿಸಿದ್ದು, ಶ್ಲಾನೀಯ ಕಾರ್ಯ ಎಂದರು.
ಸಿಇಒ ಅಶೋಕ ಬಂಕಾಪುರೆ ಲಾಭ&ಹಾನಿ, ಅಢಾವೆ ಪತ್ರಿಕೆ ಮಂಡಿಸಿದರು.

ಅತ್ಯುತ್ತಮ ಶಾಖೆಯಾಗಿ ಸಂಕೇಶ್ವರ, ಉತ್ತಮ ಶಾಖಾ ವ್ಯವಸ್ಥಾಪಕರಾಗಿ ಬಸವನ ಕುಡಚಿ ಶಾಖೆಯ ವಸಂತ ಕುಲಕರ್ಣಿ, ಉತ್ತಮ ಸೇವಕರಾಗಿ ಅಜಿತ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಯುವ ಮುಖಂಡ ಉತ್ತಮ ಪಾಟೀಲ, ಕಾರ್ಯಾಧ್ಯ ಅಭಿನಂದನ ಪಾಟೀಲ, ಅಶೋಕಕುಮಾರ ಅಸೂದೆ, ಸಂಚಾಲಕ ಅಭಯ ಕರೋಲೆ, ಜಯಪಾಲ ನಾಗಾವೆ, ಅಪ್ಪಾಸಾಹೇಬ ಕಡೋಲೆ, ಪಿರಗೊಂಡ ಪಾಟೀಲ, ಭುಜಗೊಂಡ ಪಾಟೀಲ, ಶರದ ಲಡಗೆ, ಸತೀಶ ಪಾಟೀಲ, ಬಾಬಾಸಾಹೇಬ ಅಪ್ರಾಜ, ಶ್ರಿಕಾಂತ ವಾಸವಾಡೆ, ನಿರ್ಮಲಾ ಬಳ್ಳೊಳೆ, ಅಜಿತ ಕಾಂಬಳೆ, ಮುಖ್ಯ ವ್ಯವಸ್ಥಾಪಕ ಎ.ಜೆ.ಬಂಕಾಪುರೆ, ರಾಜು ಪಾಟೀಲ, ಕಿಶೋರ ಬಾಳಿ, ಆರ್​.ಟಿ.ಚೌಗುಲೆ, ಆರ್​.ಎಸ್​. ಪಚಂಡಿ, ಸತೀಶ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net