ಬಹುಮಾನಕಷ್ಟೇ ಕ್ರೀಡೆ ಸೀಮಿತವಾಗದಿರಲಿ

NAGMANGLA
ನಾಗಮಂಗಲ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದ ತಾಲೂಕಿನ ಹಿರಿಯ ಕ್ರೀಡಾಪಟುಗಳಿಗೆ ಕಾಲೇಜು ಕ್ರೀಡಾರತ್ನ ಪ್ರಶಸ್ತಿ ನೀಡಲಾಯಿತು. ಎನ್.ಚಲುವರಾಯಸ್ವಾಮಿ, ನಯೀಂ ಉನ್ನಿಸಾ, ಚಂದ್ರಮೌಳಿ, ಸುರೇಶ್, ಅಶೋಕ್ ಕುಮಾರ್, ಶರತ್ ರಾಮಣ್ಣ, ಪುಟ್ಟರಾಜು ಇದ್ದರು.
Published on

ನಾಗಮಂಗಲ: ಕ್ರೀಡೆ ಎಂಬುದು ಬಹುಮಾನಗಳಿಗೆ ಸೀಮಿತವಾಗದೆ ದೈನಂದಿನ ಬದುಕಿನ ಅಭ್ಯಾಸವಾಗಲಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯಲ್ಲಿ ಪೈಪೋಟಿ ಇದ್ದಾಗ ಮಾತ್ರ ಉತ್ತಮ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ. ಕ್ರೀಡೆಯಲ್ಲಿ ನಿರಾಸಕ್ತಿ ತೋರುವುದು ಬೇಡ. ಅಭ್ಯಾಸ ನಿರಂತರವಾಗಿದ್ದಲ್ಲಿ ಮಾತ್ರ ತಮ್ಮ ಗುರಿ ತಲುಪಲು ಸಾಧ್ಯ ಎಂದರು.

ಚಂದ್ರಯಾನ-3 ವಿಜ್ಞಾನಿಗಳ ತಂಡದಲ್ಲಿ ನಮ್ಮ ತಾಲೂಕಿನ ವಿಜ್ಞಾನಿಯೊಬ್ಬರು ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ತಾಲೂಕಿನ, ಜಿಲ್ಲೆಯ ಮತ್ತು ರಾಜ್ಯದ ಪ್ರತಿಭಾವಂತರು ಈಗಿನ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಂತೆ ಕ್ರೀಡಾ ಕ್ಷೇತ್ರದಲ್ಲಿ ತಾಲೂಕಿನ ಮಕ್ಕಳು ಸಾಧನೆ ಮಾಡಲಿ. ಅದಕ್ಕೆ ಪೂರಕವಾದ ಎಲ್ಲ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದರು.

ಕಾಲೇಜು ಕ್ರೀಡಾರತ್ನ ಪ್ರಶಸ್ತಿ: ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾಧನೆ ಮಾಡಿದ ಹಿರಿಯ ಕ್ರೀಡಾಪಟುಗಳಿಗೆ ಕಾಲೇಜು ಕ್ರೀಡಾರತ್ನ ಪ್ರಶಸ್ತಿಯನ್ನು ಸಚಿವ ಎನ್.ಚಲುವರಾಯಸ್ವಾಮಿ ವಿತರಿಸಿದರು.

ತಹಸೀಲ್ದಾರ್ ನಯೀಂ ಉನ್ನಿಸಾ, ತಾಪಂ ಇಒ ಚಂದ್ರಮೌಳಿ, ಬಿಇಒ ಸುರೇಶ್, ಪಟ್ಟಣ ಠಾಣೆ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್, ಪಿಎಎಸ್‌ಐ ರವಿಕುಮಾರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುರೇಶ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಶರತ್ ರಾಮಣ್ಣ, ಮುಖಂಡರಾದ ಪುಟ್ಟರಾಜು, ವಕೀಲ ಚಂದ್ರುಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಧನಂಜಯ, ಉಪನ್ಯಾಸಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಇದ್ದರು.

ಇಂದು ಸಮಾರೋಪ: ಕ್ರೀಡಾಕೂಟದ ಸಮಾರೋಪ ಸಮಾರಂಭ ಸೆ.5ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಪಾಲ್ಗೊಳ್ಳುವರು. ಕಾಂಗ್ರೆಸ್ ಮುಖಂಡ ಸುನೀಲ್ ಲಕ್ಷ್ಮೀಕಾಂತ್ ಪ್ರಶಸ್ತಿ ವಿತರಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net