

ಕಲಬುರಗಿ: ಬಹುಮನಿ ಅರಸರು ೨೦೦ ವರ್ಷದ ಸುದೀರ್ಘ ಆಡಳಿತದಲ್ಲಿ ಅದ್ಭುತವಾದ ಕಲೆ, ವಾಸ್ತು ಶಿಲ್ಪವನ್ನು ಕೊಡುಗೆಯಾಗಿ ನೀಡಿದ್ದಾರೆ. ಇದನ್ನು ಇಂಡೋ ಇಸ್ಲಾಮಿಕ್ ಶೈಲಿ ಎನ್ನುತ್ತಾರೆ ಎಂದು ಕಲಾವಿದ, ಸಂಶೋಧಕ ರೆಹೆಮಾನ್ ಪಟೇಲ್ ಬಣ್ಣಿಸಿದರು.
ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಬಹುಮನಿ ಸಂಸ್ಥಾನದ ೬೭೭ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ,
ಬಹಮನಿ ಫೌಂಡೇಷನ್ ಅಧ್ಯಕ್ಷ ಖಾಜಿ ರಿಜ್ವಾನ್ ಉರ್ ರೆಹಮಾನ್ ಸಿದ್ದಿಕಿ ಮಾತನಾಡಿ, ಎರಡು ದಶಕಗಳಿಂದ ಸಂಸ್ಥಾಪನಾ ದಿನ ಆಚರಿಸಲಾಗುತ್ತಿದೆ ಎಂದರು.
ಛಾಯಾಗ್ರಾಹಕ ಮೊಹ್ಮದ್ ಅಯಾಜೊದ್ದೀನ್ ಪಟೇಲ್ ಮಾತನಾಡಿ, ಅಲಾವುದ್ದೀನ್ ಹಸನ್ ಬಹಮನ್ ಶಾ ೧೩೪೭ ರ ಆ.೩ ರಂದು ರಾಜನಾಗಿ ಪಟ್ಟಾಭಿಷಿಕ್ತನಾದರು ಮತ್ತು ಅಹ್ಸನಾಬಾದ್‌ನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು. ಸಾಮ್ರಾಜ್ಯವನ್ನು ವಿಸ್ತರಿಸಿದರು. ೧೫೨೭ ರಲ್ಲಿ ಅದರ ಎರಡನೇ ರಾಜಧಾನಿ ಬೀದರ್‌ನಲ್ಲಿ ಕೊನೆಗೊಂಡ ರಾಜ್ಯವನ್ನು ಹದಿನೆಂಟು ರಾಜರು ಆಳಿದರು ಎಂದರು.
ಸಾಮ್ರಾಜ್ಯದ ಸಂಸ್ಥಾಪಕ ರಾಜ ಅಲಾವುದ್ದೀನ್ ಹಸನ್ ಬಹಮನ್ ಶಾ ಸಮಾಧಿಗೆ ಪುಷ್ಪನಮನ ಸಲ್ಲಿಸಲಾಯಿತು.
ಸದರ್ ಖಾಜಿ ಹಮೀದ್ ಫೈಸಲ್ ಸಿದ್ದಿಕಿ, ಜಬ್ಬಾರ್ ಗೋಳ, ಅಜೀಜುಲ್ಲಾ ಸರ್ಮಸ್ತ್, ಮಹಮ್ಮದ್ ಮೆರಾಜುದ್ದೀನ್, ನವಾಬ್ ಖಾನ್, ಅಲಾವುದ್ದೀನ್ ಅಕ್ಬರ್, ಅನ್ವರ್ ಸಿಲಾದಾರ್, ಅಸದ್ ಅನ್ಸಾರಿ, ಮಹಮ್ಮದ್ ಅಯಾಜುದ್ದೀನ್ ಪಟೇಲ್, ರೆಹಮಾನ್ ಪಟೇಲ್, ಮಹಮ್ಮದ್ ಇಸ್ಮಾಯಿಲ್, ಮೊಹಮ್ಮದ್ ಫಕ್ರುದ್ದೀನ್, ಯಾಸೀನ್ ಅಶ್ರಫ್, ಮೊಹಮ್ಮದ್ ಶಫೀಕ್, ಸಾಜಿದ್ ರಂಜೋಲ್ವಿ, ಅಬ್ದುಲ್ಲಾ ಖಾನ್, ಬಸವರಾಜ ರಾವೂರ್ ಇತರರಿದ್ದರು.