

ಚಿತ್ತಾಪುರ: ಶ್ರೀ ಸೋಮಶೇಖರ ಶಿವಾಚಾರ್ಯರು ಅಪಾರ ಪಾಂಡಿತ್ಯ ಹೊಂದಿದ್ದು, ತಪೋ ಶಕ್ತಿ ಮೂಲಕ ಅಸಂಖ್ಯಾತ ಭಕ್ತರ ಕಷ್ಟಗಳನ್ನು ದೂರ ಮಾಡುತ್ತಿದ್ದರು ಎಂದು ಸೇಡಂ- ಚಿತ್ತಾಪುರ ಶಿವಶಂಕರ ಮಠದ ಪೀಠಾಧಿಪತಿ ಶ್ರೀ ಶಿವಶಂಕರ ಶಿವಾಚಾರ್ಯರು ನುಡಿದರು.
ಬಾಹರಪೇಟದ ನಾಗಾವಿ ಮಠದ ಆವರಣದಲ್ಲಿ ಶ್ರೀ ಸೋಮಶೇಖರ ಶಿವಾಚಾರ್ಯರ ಭಕ್ತವೃಂದ ಹಾಗೂ ಋಗ್ವೇದ ವೈದಿಕ ಪುರೋಹಿತರ ಟ್ರಸ್ಟ್ನಿಂದ ಗುರುವಾರ ಹಮ್ಮಿಕೊಂಡಿದ್ದ ಶ್ರೀ ಸೋಮಶೇಖರ ಶಿವಾಚಾರ್ಯರ ಕರ್ತೃ ಗದ್ದುಗೆ ಕಟ್ಟಡ ಲೋಕಾರ್ಪಣೆ ಹಾಗೂ ಧರ್ಮಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಜೋತಿಷ್ಯ ಶಾಸ್ತçವನ್ನು ಕಲಿತಿದ್ದು, ಬಹುಭಾಷೆ ಪರಿಣತರು. ಜೀವಿತಾವಧಿಯಲ್ಲಿ ನಿರಂತರ ಅಧ್ಯಯನ ಮಾಡುತ್ತಿದ್ದರು. ಮಠಾಧೀಶರು ಹಾಗೂ ಗುರುಗಳು ಜನರಿಗೆ ಆಚಾರ-ವಿಚಾರ ತಿಳಿಸಿ, ಉತ್ತಮ ಮಾರ್ಗದತ್ತ ಕೊಂಡೊಯ್ಯಬೇಕು ಎಂಧು ಸಲಹೆ ನೀಡಿದರು.
ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಮಾತನಾಡಿ, ಸೋಮಶೇಖರ ಶ್ರೀಗಳು ತಮ್ಮಲ್ಲಿದ್ದ ಆಧ್ಯಾತ್ಮಿಕತೆಯ ಜ್ಞಾನ ಮತ್ತು ಸಾರವನ್ನು ಶಿಷ್ಯರಿಗೆ ನೀಡಿದ್ದು, ಇಂದು ಅವರ ಶಿಷ್ಯವರ್ಗ ಪುರೋಹಿತರಾಗಿ ಜನರ ಪ್ರೀತಿಗೆ ಪಾತ್ರರಾಗುತ್ತಿದ್ದಾರೆ. ಅವರ ನಿಸ್ವಾರ್ಥ ಮನೋಭಾವ ಎಲ್ಲರಿಗೂ ಮಾದರಿ ಎಂದು ಹೇಳಿದರಯ.
ಪಾಳಾದ ಶ್ರೀ ಗುರುಮೂರ್ತಿ ಶಿವಾಚಾರ್ಯ, ಬೆಳಗುಂಪಾದ ಶ್ರೀ ಅಭಿನವ ಪರ್ವತೇಶ್ವರ ಶಿವಾಚಾರ್ಯ, ಹಲಕರ್ಟಿಯ ಶ್ರೀ ರಾಜಶೇಖರ ಶಿವಾಚಾರ್ಯ, ಶ್ರೀನಿವಾಸ ಸರಡಗಿಯ ಶ್ರೀ ಅಪ್ಪಾರಾವದೇವಿ ಮುತ್ಯಾ, ದಿಗ್ಗಾಂವ್‌ದ ಶ್ರೀ ಮಲ್ಲಯ್ಯ ಮುತ್ಯಾ, ಮಾಲಗತ್ತಿಯ ಶ್ರೀ ಚನ್ನಬಸವ ಶರಣರು ಆಶೀರ್ವಚನ ನೀಡಿದರು.
ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಪ್ರಮುಖರಾದ ಚಂದ್ರಶೇಖರ ಅವಂಟಿ, ರವೀಂದ್ರ ಸಜ್ಜನಶೆಟ್ಟಿ, ಮಲ್ಲರೆಡ್ಡಿ ಗೋಪಸೇನ, ಓಂಕಾರೇಶ್ವರ ರೇಷ್ಮಿ, ಅಶೋಕ ನಿಪ್ಪಾಣಿ, ಬಸವರಾಜ ಕಾಳಗಿ, ಶರಣಬಸಪ್ಪ ಬೊಮ್ಮನಹಳ್ಳಿ, ಆನಂದ ಪಾಟೀಲ್, ಶರಣಗೌಡ ಹೊನ್ನಾಳ, ಶರಣು ಸಾಹು ಗಡೆಸೂರ, ರಮೇಶ ಬಮ್ಮನಳ್ಳಿ, ಶಿವರಾಜ ಪಾಳೇದ, ಬಸವರಾಜ ಗೌಡ ಹೊನ್ನಾಳ, ಅಯ್ಯಣ್ಣ ಸಾಹು ಗಡೆಸೂರ, ಚಂದ್ರಶೇಖರ ತೆಂಗಳಿ, ಮಲ್ಲಿಕಾರ್ಜುನ ತೆಂಗಳಿ, ಸುಧಾಕರ ಡೆಂಗಿ, ಬಸವರೆಡ್ಡಿ ಪಾಲಪ್, ಗುಂಡಪ್ಪ ಇಜಾರ, ಮಲ್ಲಿಕಾರ್ಜುನರೆಡ್ಡಿ ಇಜಾರ ಇತರರಿದ್ದರು.
ಅರ್ಚಕ ಬಳಗದ ಶಿವಶರಣಯ್ಯಸ್ವಾಮಿ ಪುರದಯ್ಯನಮಠ, ಮಂಜುನಾಥ ಶಾಸ್ತಿç, ಕರಬಸ್ಸಯ್ಯ ಶಾಸ್ತಿç, ಜಂಬಯ್ಯ ಶಾಸ್ತಿç, ಸ್ಥಾವರಮಠ, ಖೇಮಲಿಂಗ ಮಠಪತಿ ಮಂತ್ರ ಪಠಣ ಮಾಡಿದರು. ಮಂಜುನಾಥ ಶಾಸ್ತಿç ಸ್ವಾಗತಿಸಿದರು. ವೀರೇಶ ಶಾಸ್ತಿç ಮಲಕೂಡ ನಿರೂಪಣೆ ಮಾಡಿದರು. ಶಿವಶರಣಯ್ಯಸ್ವಾಮಿ ಪುರದಯ್ಯನಮಠ ವಂದಿಸಿದರು.