

ಚಿತ್ರದುರ್ಗ: ಗೋವುಗಳ ಹಾಲಿನಿಂದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಸೇರಿ ಸಿಹಿ ತಿನಿಸುಗಳು ತಯಾರಾಗುತ್ತಿವೆ. ಮಾನವರಿಗೆ ಪೌಷ್ಟಿಕ ಆಹಾರ ನೀಡುವ ಬಹುಪಯೋಗಿಯಾದ ಗೋವುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಎಂಎಲ್ಸಿ ಡಿ.ಟಿ. ಶ್ರೀನಿವಾಸ್ ಸಲಹೆ ನೀಡಿದರು.
ಶ್ರೀಕೃಷ್ಣ ಯಾದವ ಮಹಾಸಂಸ್ಥಾನ ಮಠದಲ್ಲಿ ಬುಧವಾರ ಗೋಶಾಲೆ ಉದ್ಘಾಟಿಸಿ ಮಾತನಾಡಿ, ವೇದಾಂತ ಸೆಸ ಗೋವಾ ಕಂಪನಿ ಈ ಕಾರ್ಯಕ್ಕೆ ಸಹಕಾರ ನೀಡಿದ್ದು, ಮೆಚ್ಚುಗೆಯ ಸಂಗತಿ ಎಂದರು.
ಇದೇ ವೇಳೆ ಕಂಪನಿ ಮುಖ್ಯಸ್ಥರಾದ ಪ್ರಿನ್ಸ್ ಜಾನ್, ನಾರಾಯಣ್ ಅವರನ್ನು ಸನ್ಮಾನಿಸಲಾಯಿತು. ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಶಿವಣ್ಣ, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಜಿಪಂ ಮಾಜಿ ಅಧ್ಯಕ್ಷೆ ಗೀತಾ ನಂದಿನಿಗೌಡ, ಮುಖಂಡರಾದ ಕೆ.ಸಿ. ರಮೇಶ್, ಕೂನಿಕೆರೆ ರಾಮಣ್ಣ, ಹಾಲೇಶ್, ವೆಂಕಟಚಲಪತಿ, ಧರ್ಮಪುರ ಶಿವಣ್ಣ, ಯತೀಶ್, ಇಂದ್ರನಾಥ್ ಇತರರಿದ್ದರು.