ಬಹುತ್ವದಿಂದ ಕೂಡಿದ ಜಾನಪದ ಸಂಸ್ಕೃತಿ

janpad faction
ಬೀದರ್‌ನಲ್ಲಿ ಏರ್ಪಡಿಸಿದ್ದ ವಿಶ್ವ ಜಾನಪದ ದಿನಾಚರಣೆಯನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರೇಮಸಾಗರ ದಾಂಡೇಕರ್ ಉದ್ಘಾಟಿಸಿದರು. ಡಾ.ಜಗನ್ನಾಥ ಹೆಬ್ಬಾಳೆ, ಬಸವರಾಜ ಮೂಲಗೆ, ಡಾ.ರಾಜಕುಮಾರ ಹೆಬ್ಬಾಳೆ, ಎಸ್.ಬಿ.ಕುಚಬಾಳ ಇತರರಿದ್ದರು.
Published on

ಬೀದರ್: ಭಾರತೀಯ ಸಮಾಜ ಬಹುತ್ವದಿಂದ ಕೂಡಿದೆ. ತನ್ನ ಮೂಲ ಸತ್ವ ಆಶಯಗಳನ್ನು ಉಳಿಸಿಕೊಂಡು ಕಾಲಕ್ಕೆ ತಕ್ಕಂತೆ ರೂಪಾಂತರ ಆಗುವ ಪರಂಪರೆಯನ್ನು ಜಾನಪದ ಹೊಂದಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ ಮತ್ತು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪಿಜಿ ಸೆಂಟರ್ ಸಹಯೋಗದಡಿ ನಗರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿಶ್ವ ಜಾನಪದ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಎಲ್ಲ ಬೇಸರವನ್ನು ನೀಗಿಸುವ, ಸಂತೋಷ ಇಮ್ಮಡಿಗೊಳಿಸುವ, ಸಾಮರಸ್ಯ ಸಂಬಂಧಗಳನ್ನು ಬೆಸೆಯುವ ಶಕ್ತಿ ಜಾನಪದಕ್ಕಿದೆ. ಈ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು.

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರೇಮಸಾಗರ ದಾಂಡೇಕರ್ ಉದ್ಘಾಟಿಸಿ ಮಾತನಾಡಿ, ತಲೆತಲಾಂತರಗಳಿಂದ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಕಲಾವಿದರನ್ನು ಗೌರವಿಸುವುದು ಸಮಾಜದ ಆದ್ಯ ಕರ್ತವ್ಯವಾಗಬೇಕು ಎಂದು ಆಶಿಸಿದರು.

ಅಧ್ಯಾಪಕ ಬಸವರಾಜ ಮೂಲಗೆ ಉಪನ್ಯಾಸ ನೀಡಿ, ಜಾನಪದ ಸಂಸ್ಕೃತಿ ಅಳಿದರೆ ನಮ್ಮತನವನ್ನು ನಾವು ಕಳೆದುಕೊಂಡಂತೆ. ಜಾನಪದ ಸೊಗಡಿನಲ್ಲೇ ಭಾರತೀಯ ಮೂಲ ಪರಂಪರೆಯ ಸತ್ವ ಅಡಗಿದೆ. ಹೀಗಾಗಿ ಆಧುನಿಕತೆ ಭರಾಟೆಗೆ ಸಿಲುಕಿ ಇಂಥ ಮಾತೃ ಸಂಸ್ಕೃತಿ ಅಳಿಯಲು ಬಿಡಬಾರದು ಎಂದು ಸಲಹೆ ನೀಡಿದರು.

ದೇವಿದಾಸ ಚಿಮಕೋಡ, ಯಲ್ಲಪ್ಪ ಮೊನಟಗಿ, ಶಿವಶರಣಪ್ಪ ಗಣೇಶಪುರ, ಬಸವರಾಜ ಹೆಗ್ಗೆ, ರವಿದಾಸ ಕಾಂಬ್ಳೆ, ಪವನ ನಾಟೇಕರ್, ಪವನ ಪಾರೆ ಇದ್ದರು. ಪರಿಷತ್ ತಾಲೂಕು ಅಧ್ಯಕ್ಷ ಎಸ್.ಬಿ. ಕುಚಬಾಳ ಸ್ವಾಗತಿಸಿದರು. ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net