

ಕಲಬುರಗಿ: ಸೌಹಾರ್ದ ಕರ್ನಾಟಕ ಸಂಘಟನೆಯಿಂದ ನಗರದಲ್ಲಿ ಜ.17, 18 ಮತ್ತು 19ರಂದು ಬಹುತ್ವ ಸಂಸ್ಕೃತಿ ಭಾರತೋತ್ಸವ ರಾಜ್ಯಮಟ್ಟದ ಸೌಹಾರ್ದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕಿ ಮೀನಾಕ್ಷಿ ಬಾಳಿ ತಿಳಿಸಿದರು.
ಸೌಹಾರ್ದತೆಯ ಜಿಲ್ಲೆಯಲ್ಲಿ ಕೋಮು ಬೀಜ ಬಿತ್ತುತ್ತಿದ್ದು, ಯುವಕರು ಕೋಮು ಜಾಲಕ್ಕೆ ಬೀಳದಂತೆ ತಡೆಯಲು ಎಲ್ಲ ಪ್ರಜ್ಞಾವಂತ, ವಿಚಾರವಾದಿಗಳಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೧೭ರಂದು ಶರಣಬಸವೇಶ್ವರ ದೇವಸ್ಥಾನದಿಂದ ಎಸ್‌ವಿಪಿ ಚೌಕ್, ಜಗತ್ ವೃತ್ತ ಮಾರ್ಗವಾಗಿ ಕೆಬಿಎನ್ ದರ್ಗಾವರೆಗೆ ಸೌಹಾರ್ದ ಬೈಕ್ ಜಾಥಾ ನಡೆಯಲಿದ್ದು, ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಚಾಲನೆ ನೀಡಲಿದ್ದಾರೆ. ದರ್ಗಾದ ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಸಮಾರೋಪದಲ್ಲಿ ಇರಲಿದ್ದಾರೆ ಎಂದರು.
೧೮ರAದು ನಗರದ ಡಾ.ಎಸ್.ಎಂ.ಪAಡಿತ ರಂಗಮAದಿರದಲ್ಲಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಮತ್ತು ಸಂಶೋಧನೆ ಕೇಂದ್ರದ ಸಹಯೋಗದಲ್ಲಿ ತತ್ವಪದ ಗಾಯನ ನಡೆಯಲಿದೆ. ವಚನ, ತತ್ವಪದ, ಕವ್ವಾಲಿ, ಕ್ರಾಂತಿಗೀತೆಗಳ ಗಾಯನ ಇರಲಿದೆ ಎಂದರು.
೧೯ರAದು ಬೆಳಿಗ್ಗೆ ೧೧ಕ್ಕೆ ನಗರದ ಕನ್ನಡ ಭವನದಿಂದ ಮೆರವಣಿಗೆ ನಡೆಸಿ ಜಗತ್ ವೃತ್ತದಲ್ಲಿ ಬಹಿರಂಗ ಸಮಾವೇಶ ನಡೆಯಲಿದ್ದು, ಸಾಣೆಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಉದ್ಘಾಟಿಸಲಿದ್ದು, ಭಾಲ್ಕಿಯ ಶ್ರೀ ಬಸವಲಿಂಗ ಪಟ್ಟz್ದÉÃವರು ಸಾನ್ನಿಧ್ಯ ವಹಿಸಲಿದ್ದಾರೆ. ಗದಗದ ಶ್ರೀ ಸಿದ್ಧರಾಮ ಶಿವಯೋಗಿ ಅಧ್ಯP್ಷÀತೆ ವಹಿಸುವರು. ರಾಜ್ಯದ ಎಲ್ಲ ಜಿಲ್ಲೆಗಳ ಎಲ್ಲ ಧರ್ಮ ಗುರುಗಳು, ಸ್ವಾಮೀಜಿ, ವಿಚಾರವಾದಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಪ್ರಮುಖರಾದ ಪ್ರಭುಲಿಂಗ ಮಹಾಗಾಂವಕರ್, ಸುರೇಶ ಹಾದಿಮನಿ, ಗುಂಡಪ್ಪ ಲಂಡನಕರ್, ಡಾ.ಹನುಮಂತರಾಯ ದೊಡ್ಡಮನಿ, ತಿಪ್ಪಣ್ಣ ಒಡೆಯರಾಜ, ಮಹಾಂತೇಶ ಕೌಲಗಿ, ದತ್ತಾತ್ರೇಯ ಇಕ್ಕಳಕಿ, ಪ್ರಕಾಶ ಕಪನೂರ ಇತರರಿದ್ದರು.