ಬಹಿಷ್ಕಾರ ವಾಪಸು ಪಡೆದ ಮತದಾರರು

Gramayana Logo
Published on

ಗೋಕರ್ಣ: ತದಡಿ ಬಳಿಯ ಬೇಲೆಕಾನಿನ ಮುಕ್ರಿ ಸಮಾಜದವರು ಬಹಿಷ್ಕಾರ ಹಿಂಪಡೆದು ಮತದಾನ ಮಾಡಿದರು. ತಮ್ಮ ಭಾಗಕ್ಕೆ ರಸ್ತೆ ನಿರ್ವಿುಸಲು ಸಂಬಂಧಿಸಿದವರು ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಮತದಾನದಿಂದ ದೂರವಿರಲು ನಿರ್ಧರಿಸಿ ತಹಸೀಲ್ದಾರರಿಗೆ ಮನವಿ ನೀಡಿದ್ದರು.

ಪೊಲೀಸರು, ತಾಲೂಕ ಪಂಚಾಯಿತಿ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ರಸ್ತೆ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಸಂರ್ಪಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿ ಮುಕ್ರಿ ಸಮಾಜದ ಪ್ರಮುಖರ ಮನವೊಲಿಸಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಯಿತು. ಪಿಎಸ್​ಐ ನವೀನ ನಾಯ್ಕ, ತಾಪಂ ಇಒ ಸಿ.ಟಿ. ನಾಯ್ಕ, ಗ್ರಾಪಂ ಆಡಳಿತಾಧಿಕಾರಿ ಆರ್.ಜಿ. ಗುನಗಿ, ಪಿಡಿಒ ವಿನಯಕುಮಾರ ಮತದಾರರ ಮನವೊಲಿಸಿದರು.

ಶಾಂತಿಯುತ: ಗೋಕರ್ಣದ ಎಲ್ಲ 14 ಮತಗಟ್ಟೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು. ಕೆಲ ಮತಗಟ್ಟೆಗಳಲ್ಲಿ ಮಾತ್ರ ಸರತಿ ಸಾಲು ಕಂಡು ಬಂತು. ಹಿರಿಯರಾದ ಹೀರಾಬಾಯಿ ಗಂಗಾಧರ ಶೆಟ್ಟಿ ವೀಲ್​ಚೇರ್​ನಲ್ಲಿ ಬಂದು ಮತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net