ಬಸ್‌ನಿಲ್ದಾಣದಲ್ಲಿ ಬೆಂಕಿ

6aa11dde-a0e8-4b38-85ea-f77b06b0c718--001
Published on

ಚಿತ್ರದುರ್ಗ:ಹೊಸದುರ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ಕೂಡಲೇ ಎಚ್ಚೆತ್ತ ಪ್ರಯಾ ಣಿಕರು,ಸಿಬ್ಬಂದಿಯಿಂದಾಗಿ ಅನಾಹುತ ತಪ್ಪಿದೆ. ಘಟನೆಗೆ ಶಾರ್ಟ್‌ಸರ್ಕ್ಯೂಟ್ ಕಾರಣವಾಗಿದ್ದು,ಬೆಳಗ್ಗೆ 6.30ರ ಸಮಯದಲ್ಲಿ ಬೆಂಕಿ ಹೊತ್ತಿ ಕೊಂಡಿದೆ. ಹಠಾತ್ ಕಾಣಿಸಿದ ಬೆಂಕಿಯಿಂದಾಗಿ ಪ್ರಯಾಣಿಕರು,ಬಸ್ ನಿಲ್ದಾಣದ ಸಿಬ್ಬಂದಿ ಗಾಭರಿಕೊಂಡಿದ್ದಾರೆ. ಸ್ಥಳದಲ್ಲಿದ್ದವರು ಕೂಡಲೇ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾಹಿತಿ ತಿಳಿದ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಹೆಚ್ಚಿನ ಅನಾಹುತವನ್ನು ನಿಯಂತ್ರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net