ಬಸ್‌ಗೆ ಪೂಜೆ ಸಲ್ಲಿಸಿ ತಂಗುದಾಣಕ್ಕೆ ಚಾಲನೆ

ydg7
ಹುಣಸಗಿ ಪಟ್ಟಣದ ವಿದ್ಯಾನಗರದಲ್ಲಿ (ಆಶ್ರಯ ಕಾಲನಿ) ಬಸ್‌ಗೆ ಪೂಜೆ ಸಲ್ಲಿಸಿ ತಂಗುದಾಣಕ್ಕೆ ಚಾಲನೆ ನೀಡಲಾಯಿತು.
Published on

ಹುಣಸಗಿ: ವಿದ್ಯಾನಗರದ ಆಶ್ರಯ ಕಾಲನಿಯಲ್ಲಿ ಸಾರಿಗೆ ಬಸ್‌ಗೆ ವಿಶೇಷ ಪೂಜೆ ಸಲ್ಲಿಸಿ ತಂಗುದಾಣಕ್ಕೆ ಚಾಲನೆ ನೀಡಲಾಯಿತು. ಕೆಪಿಸಿಸಿ ಸದಸ್ಯ ಸಿದ್ದಣ್ಣ ಎನ್.ಮಲಗಲದಿನ್ನಿ ಮಾತನಾಡಿ, ಜನರು ಮೂಲ ಬಸ್ ನಿಲ್ದಾಣಕ್ಕೆ ಬರಲು ಸಾಧ್ಯವಾಗದೆ ಅನೇಕ ತೊಂದರೆ ಎದುರಿಸುವಂತಾಗಿತ್ತು. ಸದ್ಯ ಆಶ್ರಯ ಕಾಲನಿಯಲ್ಲಿ ತಂಗುದಾಣ ಪ್ರಾರಂಭಿಸಿದ್ದರಿAದ ವೇಗದೂತ ಮತ್ತು ಸಾಮಾನ್ಯ ಬಸ್ ನಿಲುಗಡೆ ಸಾಧ್ಯವಾಗಿದೆ ಎಂದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ತಿಪ್ಪಣ್ಣ ರಾಠೋಡ್, ಪ್ರಮುಖರಾದ ಚನ್ನಯ್ಯ ಸ್ವಾಮಿ ಹಿರೇಮಠ, ಚಂದ್ರಶೇಖರ ದಂಡಿನ್, ಆರ್.ಎಂ. ರೇವಡಿ, ಸಿದ್ರಾಮಪ್ಪ ಮುದಗಲ್, ಮಹಾಂತೇಶ ಮಲಗಲದಿನ್ನಿ, ಶಾಂತಗೌಡ ಪಾಟೀಲ್, ಮಲ್ಲು ಬಾಕ್ಲಿ, ಗುಂಡು ಅಂಗಡಿ, ರಮೇಶ ವಾಲಿ, ಕಾಶೀಮ್ ಚೌದ್ರಿ, ರವಿ ಮಲಗಲದಿನ್ನಿ, ಸೋಪಿಸಾಬ ಟೊಣ್ಣೂರ, ಅಂಬು ನೂಲಿನ್, ಶರಣು ಮಲ್ಲಾಬಾದಿ, ತಮ್ಮಣ್ಣ ಚೌದ್ರಿ, ಸಾರಿಗೆ ನಿಯಂತ್ರಕ ಅಧಿಕಾರಿ ಶಾಂತಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net