ಬಸ್ ಹತ್ತುವಾಗಲೇ ಬಂಗಾರ ಕಳ್ಳತನ

Crime Logo
Published on

ಕಲಬುರಗಿ: ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಆಭರಣಗಳನ್ನು ಕಳ್ಳತನ ಮಾಡಲಾಗಿದೆ. ಪಾಣೆಗಾಂವ ಬಿ ತಾಂಡಾದ ಪ್ರಿಯಾಂಕಾ ರಾಠೋಡ್ ಆಭರಣ ಕಳೆದುಕೊಂಡವರು. ಸಹೋದರನ ಮದುವೆಗಾಗಿ ಆಳಂದ ತಾಲೂಕಿನ ನರೋಣಾ ಗ್ರಾಮಕ್ಕೆ ಮಕ್ಕಳೊಂದಿಗೆ ಹೊರಟ್ಟಿದ್ದ ಪ್ರಿಯಾಂಕಾ ಅವರು ನಿಲ್ದಾಣದಲ್ಲಿ ಬಸ್ ಹತ್ತುವಾಗ ವ್ಯಾನಿಟಿ ಬ್ಯಾಗ್‌ನ ಚೈನ್ ಬಿಚ್ಚಿರುವುದು ನೋಡಿದಾಗ ಕಳ್ಳತನವಾಗಿದ್ದು ತಿಳಿದು ಬಂದಿದೆ. ಬ್ಯಾಗ್‌ನಲ್ಲಿ ೧೦ ಗ್ರಾಂ ನೆಕ್ಲೆಸ್, ಐದು ಗ್ರಾಂ ಕಿವಿಯೋಲೆ ಕಳ್ಳತನ ಮಾಡಲಾಗಿದೆ ಎಂದು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net