ಬಸ್​ ಹತ್ತುವಾಗ ಬಿದ್ದು ಸಾವು

Published on

ಮಧುಗಿರಿ: ತಾಲೂಕಿನ ಹೊಸಕೆರೆ ಬಸ್​ ನಿಲ್ದಾಣದ ಬಳಿ ಕೆಎಸ್​ಆರ್​ಟಿಸಿ ಬಸ್​ ಹತ್ತುವ ವೇಳೆ ಕಾಮಾಕ್ಷಮ್ಮ (50) ಕಾಲು ಜಾರಿ ಬಿದ್ದು ಮಂಗಳವಾರ ಮೃತಪಟ್ಟಿದ್ದಾರೆ. ಪಾವಗಡದಿಂದ ತುಮಕೂರಿಗೆ ಹೋಗುವ ಬಸ್​ ಹತ್ತುವ ಸಮಯದಲ್ಲಿ ಕಾಲುಜಾರಿ ಕೆಳಗೆ ಬಿದ್ದ ಪರಿಣಾಮ ಕಾಮಾಕ್ಷಮ್ಮ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಆಂಬುಲೆನ್ಸ್​ ಮೂಲಕ ಮಧುಗಿರಿಯ ತಾಲೂಕು ಆಸ್ಪತ್ರೆಯಲ್ಲಿ ಸಾಗಿಸಿ ಚಿಕಿತ್ಸೆ ಕೊಡಿಸಲು ಯತ್ನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಹಿಳೆಯ ಸಂಬಂಧಿಕರು ನೀಡಿದ ದೂರಿನನ್ವಯ ಸ್ಥಳ ಭೇಟಿ ಮಾಡಿದ ಪಿಎಸ್​ಐ ರವಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net