ಬಸ್ ಹತ್ತುವಾಗ ಚಿನ್ನಾಭರಣ ಕಳ್ಳತನ

Crime Logo
Published on

ಕಲಬುರಗಿ: ಬಸ್ ಹತ್ತುವ ವೇಳೆ ಜನಸಂದಣಿಯ ಲಾಭ ಪಡೆದು, ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಎರಡು ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆ ಸೋಮವಾರ ನಡೆದಿದೆ. ಸಿದ್ರಾಮೇಶ್ವರ ಕಾಲನಿಯ ಅರ್ಚನಾ ನಾಟಿಕಾರ ಚಿನ್ನಾಭರಣ ಕಳೆದುಕೊಂಡವರು. ಆಳಂದ ತಾಲೂಕಿನ ಹಿರೋಳಿಯ ಸೋಮೇಶ್ವರ ದೇವರ ಜಾತ್ರೆ ನಿಮಿತ್ತ ನಗರದ ಆಳಂದ್ ಚೆಕ್ ಪೋಸ್ಟ್ ಮೂಲಕ ಬಸ್‌ಗೆ ಹೋಗುವಾಗ ವ್ಯಾನಿಟಿ ಬ್ಯಾಗ್‌ನಲ್ಲಿದ್ದವು. ಬಸ್ ಹತ್ತುವಾಗ ಸಾರ್ವಜನಿಕರು ಹೆಚ್ಚಾಗಿ ಇರುವುದರಿಂದ ನೂಕು ನುಗ್ಗಲು ಆಗಿರುತ್ತದೆ. ಬಸ್ ಹತ್ತಿ ಬೋಸಗಾ ಕ್ರಾಸ್ ಬಳಿ ಹೋಗಿದ್ದು, ನಿರ್ವಾಹಕನಿಗೆ ಹಣ ನೀಡಲು ಮುಂದಾದಾಗ ಕಳ್ಳತನ ಆಗಿರುವುದು ತಿಳಿದಿದೆ. ಬ್ಯಾಗ್‌ನಲ್ಲಿದ್ದ ಎರಡು ಸಾವಿರ ರೂ.ನಗರದು, ೪೫ ಗ್ರಾಂ ಬಂಗಾರದ ಎರಡು ಎಳೆಯ ತಾಳಿಸರ, ಐದು ಗ್ರಾಂನ ಮೂರು ಹರಳಿನ ಉಂಗುರ ಸೇರಿ ಒಟ್ಟು ಎರಡು ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನವಾಗಿದೆ. ಬಸ್ ಹತ್ತುವಾಗ ಹಿಂದೆ ಮೂವರು ಬುರ್ಕಾ ಧರಿಸಿದ ಮಹಿಳೆಯರು ಇದ್ದು, ಅವರನ್ನು ನೋಡಿದರೆ ಗುರುತಿಸುತ್ತೇನೆ ಎಂದು ಸಬ್ ಅರ್ಬನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net