ಬಸ್ ಸೌಕರ್ಯ ಕಲ್ಪಿಸಲು ಆಗ್ರಹ

6 lxr 4
ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಲಕ್ಷೆ್ಮೕಶ್ವರ ತಾಲೂಕಿನ ಗುಲಗಂಜಿಕೊಪ್ಪ ಗ್ರಾಮದ ವಿದ್ಯಾರ್ಥಿಗಳು ಲಕ್ಷೆ್ಮೕಶ್ವರ-ಹಾವೇರಿ ಮಾರ್ಗದ ಬಸ್ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು
Published on

ಲಕ್ಷೆ್ಮೕಶ್ವರ: ಸಕಾಲಕ್ಕೆ ಬಸ್ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ತಾಲೂಕಿನ ಗುಲಗಂಜಿಕೊಪ್ಪ ಗ್ರಾಮದ ವಿದ್ಯಾರ್ಥಿಗಳು ಲಕ್ಷೆ್ಮೕಶ್ವರ- ಹಾವೇರಿ ಮಾರ್ಗದ ಬಸ್ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.

‘ಮುಖ್ಯ ರಸ್ತೆಯಿಂದ ಅನತಿ ದೂರದಲ್ಲಿರುವ ನಮ್ಮೂರಿನೊಳಗೆ ಯಾವುದೇ ಬಸ್​ಗಳು ಬರುವುದಿಲ್ಲ. ನಾವು ಮುಖ್ಯ ರಸ್ತೆಗೆ ನಡೆದುಕೊಂಡೇ ಬರುತ್ತೇವೆ. ಆದರೆ, ಗಂಟೆಗಟ್ಟಲೆ ಕಾದರೂ ಈ ಮಾರ್ಗವಾಗಿ ಸಂಚರಿಸುವ ಬಹುತೇಕ ಬಸ್​ಗಳನ್ನು ನಿಲ್ಲಿಸುವುದಿಲ್ಲ. ಇದರಿಂದ ನಿತ್ಯವೂ ಸಮಯಕ್ಕೆ ಸರಿಯಾಗಿ ಶಾಲೆ-ಕಾಲೇಜಿಗೆ ಹೋಗುವುದು ಕಷ್ಟವಾಗಿದೆ. ಬಸ್​ಪಾಸ್ ಹೊಂದಿರುವ ವಿದ್ಯಾರ್ಥಿಗಳು ಎನ್ನುವ ಕಾರಣಕ್ಕೆ ಬಸ್​ಗಳನ್ನು ನಿಲ್ಲಿಸುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಅನುಕೂಲ ಕಲ್ಪಿಸಬೇಕು’ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಗ್ರಹಿಸಿದರು.

ಸ್ಥಳಕ್ಕಾಗಮಿಸಿದ ಸಾರಿಗೆ ಇಲಾಖೆ ಅಧಿಕಾರಿಗಳ ಎದುರೇ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮದ ನಿಂಗನಗೌಡ ಹೊಸಗೌಡ್ರ ಅವರು, ಸಾರಿಗೆ ಸಂಪರ್ಕದ ಅವ್ಯವಸ್ಥೆ ಬಗ್ಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ನಮ್ಮೂರಿನ ವಿದ್ಯಾರ್ಥಿಗಳು ನಿತ್ಯ ಬಸ್ಸಿಗಾಗಿ ಪರಿತಪಿಸುವುದು ತಪ್ಪುತ್ತಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ನೋಡಿ ಬೇಕಂತಲೇ ಬಸ್ ನಿಲ್ಲಿಸುವುದಿಲ್ಲ. ಹಾಗಾದರೆ ಬಸ್ ಪಾಸ್ ಯಾಕೆ ಕೊಡಬೇಕಿತ್ತು?. ಪಾಸ್ ಇದ್ದರೂ ವಿದ್ಯಾರ್ಥಿಗಳು ಖಾಸಗಿ ವಾಹನಲ್ಲಿ ಸಂಚರಿಸುವುದು ತಪ್ಪುತ್ತಿಲ್ಲ. ಆದ್ದರಿಂದ ಈ ಮಾರ್ಗವಾಗಿ ಸಂಚರಿಸುವ ಎಲ್ಲ ಬಸ್​ಗಳನ್ನು ನಿಲುಗಡೆ ಮಾಡುವ ವ್ಯವಸ್ಥೆಯಾಬೇಕು ಎಂದು ಆಗ್ರಹಿಸಿದರು.

ಅಣ್ಣಪ್ಪ ರಾಮಗೇರಿ, ನೀಲಪ್ಪಗೌಡ ದುರಗನಗೌಡ್ರ, ಕರಿಯಪ್ಪಗೌಡ ಹೊಸಗೌಡ್ರ, ಚನ್ನಬಸಯ್ಯ ಗಡ್ಡದೇವರಮಠ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net