ಬಸ್ ಸೈಡಿಗೆ ನಿಲ್ಲಿಸಿ ಎಂದಿದ್ದಕ್ಕೆ ಪೇದೆ ಮೇಲೆ ಹಲ್ಲೆ

Published on


ಕಮಲಾಪುರ: ಖಾಸಗಿ ಬಸ್‌ವೊಂದನ್ನು ರಸ್ತೆ ಪಕ್ಕ ನಿಲ್ಲಿಸಿ ಎಂದು ಹೇಳಿದ್ದಕ್ಕೆ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಕುರಿಕೋಟಾದಲ್ಲಿ ಗುರುವಾರ ಸಂಜೆ ಹಲ್ಲೆ ಮಾಡಲಾಗಿದೆ. ಮಹಾಗಾಂವ್ ಠಾಣೆ ಪೇದೆ ರಾಜಶೇಖರ ಮೇಲೆ ಕುರಿಕೋಟಾದ ರಮೇಶ ಸಾಹು ಮತ್ತು ವಿನಯ ಸಾಹು ಹ¯್ಲೆ ಮಾಡಿದ್ದಾರೆ. ಕುರಿಕೋಟಾ ಬಳಿ ರಸ್ತೆಯಲ್ಲಿ ಖಾಸಗಿ ಬಸ್ ನಿಲ್ಲಿಸಿದ್ದು, ಪೇದೆ ರಾಜಶೇಖರ ರಸ್ತೆಯ ಪಕ್ಕದಲ್ಲಿ ನಿಲ್ಲಿಸುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ರಮೇಶ, ವಿನಯ ಪೇದೆ ಜತೆ ಜಗಳ ತೆಗೆದಿದ್ದಾರೆ. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಮಹಾಗಾಂವ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net