ಬಸ್-ಬೈಕ್ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

IMG-20210320-WA0054
Published on

ವಿಜಯಪುರ: ಸರ್ಕಾರಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಸವಾರರಿಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಇಂಡಿ ತಾಲೂಕಿನ ಲಾಳಸಂಗಿ ಗ್ರಾಮದ ಬಳಿ ಶನಿವಾರ ಬೆಳಗ್ಗೆ ನಡೆದಿದೆ.

ಖೇಡಗಿ ಗ್ರಾಮದ ಕೆವಿಜಿ ಬ್ಯಾಂಕ್ ಮ್ಯಾನೆಜರ್ ಬಿ.ಎಸ್. ಬಿರಾದಾರ, ಕ್ಯಾಶಿಯರ್ ಚೈತನ್ಯ ಕುಮಾರ ಸಾವಿಗೀಡಾಗಿದ್ದಾರೆ. ಇಂಡಿಯಿಂದ ಖೇಡಗಿ ಗ್ರಾಮಕ್ಕೆ ಹೋಗುವ ಸಂದರ್ಭ ಬೈಕ್ ಸವಾರರಿಗೆ ಬಡ್ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು ಬಸ್ ಚಾಲಕ ಮತ್ತು ಬಸ್ ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net