ಬಸ್ ಪಾಸ್ ಸೌಲಭ್ಯ ವಿಸ್ತರಿಸಿ: ಎಐಡಿಎಸ್‌ಒ ಆಗ್ರಹ

DSC_2886
Published on

ಮೈಸೂರು: ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್ ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆ ಮುಗಿಯುವವರೆಗೂ ಬಸ್ ಪಾಸ್ ಸೌಲಭ್ಯವನ್ನು ವಿಸ್ತರಣೆ ಮಾಡಬೇಕು ಎಂದು ಎಐಡಿಎಸ್‌ಒ ಆಗ್ರಹಿಸಿದೆ.

ಕಳೆದ ಬಾರಿ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್ ಮತ್ತು ವಿವಿ ವಿದ್ಯಾ ರ್ಥಿಗಳ ವಿದ್ಯಾರ್ಥಿ ಬಸ್‌ಪಾಸ್ ಅನ್ನು 2 ತಿಂಗಳ ಕಾಲ ಹೆಚ್ಚುವರಿ ಶುಲ್ಕವನ್ನು ಪಡೆದು ವಿಸ್ತರಣೆ ಮಾಡಿತ್ತು. ಆ ಗಡುವಿನ ಪ್ರಕಾರ, ಆಗಸ್ಟ್ 31ಕ್ಕೆ ಪಾಸಿನ ಅವಧಿ ಮುಗಿಯುತ್ತದೆ. ಇನ್ನೂ ಮುಂದೆ ಪ್ರಯಾಣಿಸಲು ಹಣ ಪಾವತಿಸಿ ಓಡಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಅಂತಿಮ ವರ್ಷದ ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್ ಹಾಗೂ ವಿವಿ ವಿದ್ಯಾರ್ಥಿಗಳ ಬಸ್‌ಪಾಸ್ ಅವಧಿಯನ್ನು ಸೆಪ್ಟಂಬರ್‌ವರೆಗೆ ವಿಸ್ತರಿಸಿದೆ. ಆದರೆ ವಾಸ್ತವದಲ್ಲಿ ಇತರ ವರ್ಷದ ವಿದ್ಯಾರ್ಥಿಗಳ ಸೆಮಿಸ್ಟರ್ ತರಗತಿಗಳು ಇನ್ನೂ ಮುಂದುವರಿಯುತ್ತಿದ್ದು, ಪರೀಕ್ಷೆಗಳು ನಡೆಯಬೇಕಿದೆ. ಈಗ ಮತ್ತೆ ಒಂದೆರಡು ತಿಂಗಳ ಅವಧಿಗೆ ವಿದ್ಯಾರ್ಥಿಗಳು ಹೆಚ್ಚುವರಿ ಶುಲ್ಕ ಪಾವತಿಸಿ ಪಾಸ್ ಪಡೆಯಬೇಕು ಎಂಬುದು ಸರಿಯಲ್ಲ. ಈಗಾಗಲೇ ವಿದ್ಯಾರ್ಥಿಗಳು ತಮ್ಮ ಪಾಸಿನ ನಿಗದಿತ ದರದ ಮೇಲೆ ಹೆಚ್ಚುವರಿ ಮೊತ್ತವನ್ನು ಪಾವತಿಸಿ 2 ತಿಂಗಳ ಕಾಲ ವಿಸ್ತರಣೆ ಪಡೆದು ಪ್ರಯಾಣಿಸಿದ್ದಾರೆ. ಹೀಗಾಗಿ, ಈಗ ವಿದ್ಯಾರ್ಥಿಗಳಿಂದ ಯಾವುದೇ ಹೆಚ್ಚುವರಿ ಶುಲ್ಕ ಪಡೆಯದೆಯೇ ಪ್ರಯಾಣ ಮಾಡಲು ಅನುವು ಮಾಡಿಕೊಡಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net