ಬಸ್ ಪಲ್ಟಿಯಾಗಿ ಐವರಿಗೆ ಗಾಯ

13-hvr-07
Published on

ಹಾವೇರಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್​ನ ಸ್ಟೇರಿಂಗ್ ಕಟ್ ಆಗಿದ್ದರಿಂದ ಪಲ್ಟಿಯಾಗಿ ನಾಲ್ವರು ವಿದ್ಯಾರ್ಥಿಗಳು ಸೇರಿ ಐವರು ಗಾಯಗೊಂಡ ಘಟನೆ ತಾಲೂಕಿನ ಸಂಗೂರ ಗ್ರಾಮದ ಬಳಿ ಮಂಗಳವಾರ ಸಂಜೆ ಸಂಭವಿಸಿದೆ.

ಹಾವೇರಿಯಿಂದ ಹಾನಗಲ್ಲಿಗೆ ಹೋಗುತ್ತಿದ್ದ ವೇಳೆ ಬಸ್​ನ ಸ್ಟೇರಿಂಗ್ ಕಟ್ ಆಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ. ಹಾವೇರಿಯಿಂದ ಶಾಲೆ ಮುಗಿಸಿ ಆಡೂರ ಗ್ರಾಮಕ್ಕೆ ಹೋಗುತ್ತಿದ್ದ 7ನೇ ತರಗತಿ ವಿದ್ಯಾರ್ಥಿಗಳಾದ ಭುವನಾ ಗಿರೀಶ ಕಡೇರ, ರಕ್ಷಿತ ಚಂದ್ರು ಕೊಂಚಿಗೇರಿ, 6ನೇ ತರಗತಿಯ ಭಾನುಪ್ರಿಯಾ ಗಿರೀಶ ಕಡೇರ, 3ನೇ ತರಗತಿಯ ಪಿಲ್ಲೋ ರ್ಬಾ ಹಾಗೂ ಕಾರ್ವಿುಕ ಈರಣ್ಣ ರೇವಣ್ಣನವರ ಗಾಯಗೊಂಡಿದ್ದು, ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net