ಬಸ್ ನಿಲ್ದಾಣದಲ್ಲಿ ಮಹಿಳೆಯ ಬ್ಯಾಗ್ ನಲ್ಲಿದ್ದ ಚಿನ್ನ ದೋಚಿದ ಖದೀಮರು

crime
Published on

ಬಸ್ ನಿಲ್ದಾಣದಲ್ಲಿ ಮಹಿಳೆಯ ಬ್ಯಾಗ್ ನಲ್ಲಿದ್ದ ಚಿನ್ನ ದೋಚಿದ ಖದೀಮರು

ಸಂಕೇಶ್ವರ: ಬಸ್ ನಿಲ್ದಾಣದಲ್ಲಿ ಬಸ್ ಹತ್ತುತ್ತಿದ್ದಾಗ ಮಹಿಳೆಯ ಬ್ಯಾಗ್ ನಲ್ಲಿದ ಚಿನ್ನವನ್ನು ಯಾರೋ

ದುಷ್ಕರ್ಮಿಗಳು ದೋಚಿದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಪಟ್ಟಣದಲ್ಲಿ ಗುರುವಾರ ನಡೆದಿದೆ.

ಮುಂಬಯಿ ಮೂಲಕ ಶೋಭಾ ಕೃಷ್ಣಾ ಗವಳಿ (47) ಎಂಬುವರ ಚಿನ್ನವನ್ನು ಕಳ್ಳತನ ಮಾಡಲಾಗಿದೆ.

ಇವರು ಸಂಕೇಶ್ವರದಿಂದ ಮನಗುತ್ತಿ ಹೋಗುವ ಸಲುವಾಗಿ ಸಂಕೇಶ್ವರ ಬಸ್ ನಿಲ್ದಾಣದಲ್ಲಿ ಬಂದಿದರು. ಬೆಳಗಾವಿ ಬಸ್ ಬಂದ ವೇಳೆ ಜನರ ಗುಂಪಿನಲ್ಲಿ ತಕ್ಷಣ ಬಸ್ ಹತ್ತುವ ವೇಳೆ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಅಂದಾಜು 2,10,000 ರೂ ಮೊತ್ತದ 35 ಗ್ರಾಂ ಗಂಟನ, ತಾಳಿ ಹಾಗೂ ಅಂದಾಜು 90,000 ರೂ ಮೊತ್ತದ 15 ಗ್ರಾಂ, ನೆಕ್ಲೇಸ್ ಮತ್ತು 5 ಸಾವಿರ ರೂ. ಸೇರಿದಂತೆ ಒಟ್ಟು 3,05,000 ರೂಪಾಯಿ ಮೊತ್ತದ ಚಿನ್ನ ಹಾಗೂ ಹಣವನ್ನ ಕಳ್ಳರು ದೋಚಿದ್ದಾರೆ ಎನ್ನಲಾಗಿದೆ.

ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net