ಬಸ್ ನಿಲ್ದಾಣಕ್ಕೆ 1 ಕೋಟಿ ರೂ. ಅನುದಾನ

12 gkp 02
ಬೆಂಗಳೂರು ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ನಿಯೋಗದಲ್ಲಿ ಶಾಸಕ ಕೆ. ಜಿ. ಬೋಪಯ್ಯ, ಸಿ.ಕೆ ಬೋಪಣ್ಣ, ಮನ್ನಕಮನೆ ಸೌಮ್ಯ ಬಾಲು, ಚೈತ್ರ ಬಿ ಚೇತನ್, ಬಿ. ಎನ್ ಪ್ರಕಾಶ್, ಕೊಣಿಯಂಡ ಬೋಜಮ್ಮ ಉತ್ತಪ್ಪ, ಕಾಡ್ಯಮಾಡ ಗಿರೀಶ್ ಗಣಪತಿ ಇದ್ದರು.
Published on

ಗೋಣಿಕೊಪ್ಪ: ಗೋಣಿಕೊಪ್ಪದಲ್ಲಿ ಬಸ್ ನಿಲ್ದಾಣ ನಿರ್ಮಿಸಲು 1 ಕೋಟಿ ರೂ. ಅನುದಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ ಎಂದು ಸ್ಥಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕಮನೆ ಸೌಮ್ಯ ಬಾಲು ತಿಳಿಸಿದ್ದಾರೆ.

ಶನಿವಾರ ಶಾಸಕ ಕೆ. ಜಿ. ಬೋಪಯ್ಯ ಮುಂದಾಳತ್ವದಲ್ಲಿ ಮುಖ್ಯಮಂತ್ರಿ ಗೃಹ ಕಚೇರಿಕ್ಕೆ ನಿಯೋಗ ತೆರಳಿ ಮನವಿ ಮಾಡಿಕೊಂಡಿತ್ತು. ಮನವಿ ಪುರಸ್ಕರಿಸಿ ಮೊದಲ ಹಂತವಾಗಿ ಒಂದು ಕೋಟಿ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ನಿಯೋಗದಲ್ಲಿ ಜಿ. ಪಂ ಮಾಜಿ ಸದಸ್ಯ ಸಿ.ಕೆ ಬೋಪಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಚೈತ್ರ ಬಿ ಚೇತನ್, ಬಿ. ಎನ್ ಪ್ರಕಾಶ್, ಕೆ. ರಾಜೇಶ್, ರಾಮಕೃಷ್ಣ, ನೂರೇರ ರತಿ ಅಚ್ಚಪ್ಪ, ಹಕೀಮ್, ವಿವೇಕ್ ರಾಯ್ಕರ್, ಪುಷ್ಪಾ ಮನೋಜ್, ಕೊಣಿಯಂಡ ಬೋಜಮ್ಮ ಉತ್ತಪ್ಪ, ರಾಮದಾಸ್, ಬಗರ್‌ಹುಕುಂ ಸಕ್ರಮೀಕರಣ ಸಮಿತಿ ತಾಲೂಕು ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net