

ಹಟ್ಟಿಚಿನ್ನದಗಣಿ: ಸಮೀಪದ ವೀರಾಪೂರ ಗ್ರಾಮದ ಬಸ್‌ನಿಲ್ದಾಣ ಸೂಕ್ತ ನಿರ್ವಹಣೆಯಿಲ್ಲದೆ ಸ್ವಚ್ಛತೆ ಮಾಯವಾಗಿದೆ.
ಇದನ್ನೂ ಓದಿ: ಬಸ್ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಿ
ನಿಲ್ದಾಣ ಆರಂಭದಿಂದ ಇಲ್ಲಿಯವರೆಗೆ ಸುಣ್ಣ-ಬಣ್ಣ ಕಂಡಿಲ್ಲ, ಕೆಲವರು ಪಾನ್ ಸೇವಿಸಿ ಉಗಿಯುತ್ತಿದ್ದಾರೆ. ಇತ್ತ ಕಟ್ಟಡ ಶಿಥಿಲಗೊಂಡಿದ್ದು, ದುರಸ್ತಿಗೊಳಿಸುತ್ತಿಲ್ಲ.
ಪ್ರಯಾಣಿಕರು ತಂಗಲು ಸ್ಥಳವಿಲ್ಲ, ಮಳೆ-ಬಿಸಿಲಿನಿಂದ ತೀವ್ರ ಸಮಸ್ಯೆಯಾಗುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ರಸ್ತೆಗೆ ನಿಲ್ಲುವಂತಾಗಿದೆ. ನಿಲ್ದಾಣವನ್ನು ದುರಸ್ತಿಗೊಳಿಸಿ ಸೂಕ್ತ ನಿರ್ವಹಣೆ ಕೈಗೊಳ್ಳಬೇಕಿದೆ.
--- ವೀರಾಪೂರ ಗ್ರಾಮಸ್ಥರು
ವೀರಾಪೂರ ಗ್ರಾಮದ ಬಸ್ ನಿಲ್ದಾಣ ಸ್ವಚ್ಛಗೊಳಿಸಲು ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕರು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಎಚ್ಚರಿಕೆ ವಹಿಸಬೇಕು.ಪಿಡಿಓ ಗುರುಸಿದ್ಧಪ್ಪ ಗೆಜ್ಜಲಗಟ್ಟಾ ಗ್ರಾ.ಪಂ