

ಎಂ.ಕೆ.ಹುಬ್ಬಳ್ಳಿ: ಬಸ್ ನಿಲ್ಲಿಸದೆ ಹೆದ್ದಾರಿ ಮೂಲಕ ಸಾಗುವ ಬಸ್‌ಗಳನ್ನು ತಡೆದು ಸಮೀಪದ ದಾಸ್ತಿಕೊಪ್ಪ ಗ್ರಾಮದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಗ್ರಾಮಕ್ಕೆ ಬಸ್ ನಿಲುಗಡೆ ಇದ್ದರೂ, ಗ್ರಾಮದ ಸರ್ವಿಸ್ ರಸ್ತೆ ಮೂಲಕ ಗ್ರಾಮಕ್ಕೆ ಪ್ರವೇಶಿಸದೆ ಹೆದ್ದಾರಿ ಮೂಲಕ ಸಾಗುತ್ತಿರುವ ಬಸ್‌ಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಬಸ್ ನಿಲ್ಲಿಸಿ, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು. ಬಸ್ ಬಾರದ್ದರಿಂದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಆಗುತ್ತಿಲ್ಲ. ಗ್ರಾಮಸ್ಥರು ಸಹ ಸಂಚಾರಕ್ಕೆ ಪರದಾಡುವಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಇನ್ನು ಮುಂದೆ ಇಂತಹ ಘಟನೆ ನಡೆಯಬಾರದು. ನಿಲುಗಡೆ ಇರುವ ಬಸ್‌ಗಳನ್ನು ನಿಲ್ಲಿಸಿಯೇ ಹೋಗಬೇಕು. ಇಲ್ಲವಾದರೆ ಮತ್ತೆ ಬಸ್ ತಡೆದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ, ನಂತರ ಬಸ್ ಸಂಚಾರಕ್ಕೆ ಗ್ರಾಮಸ್ಥರು ಅನುವು ಮಾಡಿಕೊಟ್ಟರು.
ಆನಂದ ಹುಚ್ಚಗೌಡ್ರ, ಕಾರ್ತಿಕ ತಳವಾರ, ಪ್ರಕಾಶ ಶಿದ್ರಾಮನಿ, ಶಮೀರ್ ಕಡೆಮನಿ, ಸಚಿನ ಕೀಲಿಕಿತ್ತರ, ಬಸವರಾಜ ಸಿದ್ದನವರ, ಅರುಣ ಸಿದ್ದನವರ, ನಾಗರಾಜ ಗೋಣಿ, ದರ್ಶನ ಹುಚ್ಚಗೌಡ್ರ, ವಿಜಯಾನಂದ ತುರಮರಿ, ಅಕ್ಷಯ ರಾವಳ ಇತರರು ಇದ್ದರು.